More

    ತಲಕಾವೇರಿ ದೇವಸ್ಥಾನದ ಮುಂದೆ ಡಾನ್ಸ್​ ಮಾಡಿ ಎಡವಟ್ಟು: ತೀವ್ರ ಖಂಡನೆ ಬಳಿಕ ಕ್ಷಮೆಯಾಚಿಸಿದ ಹುಡುಗಿಯರು

    ಕೊಡಗು: ತಲಕಾವೇರಿ ದೇವಸ್ಥಾನದ ಹೊರಭಾಗದಲ್ಲಿ ಡಾನ್ಸ್​ ಮಾಡಿದ್ದ ವಿಡಿಯೋವನ್ನು ಇನ್​ಸ್ಟಾಗ್ರಾಂಗೆ ಅಪ್​ಲೋಡ್​ ಮಾಡಿದ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಮೂವರು ಹುಡುಗಿಯರು ಕ್ಷಮೆಯಾಚಿಸಿರುವುದಾಗಿ ವರದಿಯಾಗಿದೆ. ಡಾನ್ಸ್​ ವಿಡಿಯೋ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಬಳಿಕ ಹುಡುಗಿಯರು ಕ್ಷಮೆಯಾಚಿಸಿದ್ದಾರೆ.

    ವೈರಲ್​ ವಿಡಿಯೋ ವಿರುದ್ಧ ಕೊಡವ ಸಮಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನಮ್ಮ ಧಾರ್ಮಿಕ ಭಾವನೆಗೆ ಇದರಿಂದ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿತ್ತು. ದೇವಸ್ಥಾನದ ಮುಂದೆ ಬಾಲಿವುಡ್​ ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ್ದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೊಡವ ಸಮಾಜ ಟೀಕಿಸಿತ್ತು. ಅಂದಹಾಗೆ ತಲಕಾವೇರಿ ದೇವಸ್ಥಾನ ಕನ್ನಡಿಗರ ಪುಣ್ಯಸ್ಥಾನವಾಗಿದ್ದು, ಇದು ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿದೆ. ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನವಾಗಿದೆ.

    ಅಖಿಲ ಕೊಡವ ಸಮಾಜ ಮತ್ತು ಕೊಡವ ಸಂಘಟನೆ ಹುಡುಗಿಯರ ನಡೆಯನ್ನು ಖಂಡಿಸಿ ಪೊಲೀಸ್​ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿತ್ತು. ಹುಡುಗಿಯರು ತಕ್ಷಣ ಕೊಡಗು ಜನರ ಬಳಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಠಾಣೆಗೆ ತೆರಳಿ ದೂರು ದಾಖಲಿಸಲಾಗುವುದು ಎಂದು ಕೊಡವ ಸಮಾಜದ ಯುವ ಘಟಕ ಎಚ್ಚರಿಸಿದೆ. ದೇವಸ್ಥಾನ ಎಂಬುದು ಭಕ್ತಿ ತುಂಬಿದ ಸ್ಥಳವೋ ಹೊರತು ಮಜಾ ಮಾಡುವ ಕೇಂದ್ರವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಅಲ್ಲಿನ ಭಕ್ತಾದಿಗಳು ಕೂಡ ಯುವತಿಯರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಇದು ಹುಡುಗಿಯರ ಗಮನಕ್ಕೆ ಬಂದಿದ್ದು, ಇದಕ್ಕೆ ವಿಡಿಯೋ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ಮೂವರು ಕೂಡ ಕೊಡಗು ಜನರ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಪ್ರವಾಸಿಗರ ಈ ವರ್ತನೆ ಬೇಸರ ತರಿಸಿದೆ ಎಂದು ಕೊಡವ ಸಮಾಜ ಅಸಮಾಧಾನ ಹೊರಹಾಕಿದೆ. ಈ ರೀತಿಯ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ ಎಂದಿದ್ದಾರೆ. ಕಾವೇರಿ ತಾಯಿಯ ಮೇಲೆ ನಿಮಗೆ ಭಕ್ತಿಯಿದ್ದರೆ ಮಾತ್ರ ಇಲ್ಲಿಗೆ ಬನ್ನಿ, ಕೇವಲ ಮಜಾ ಮಾಡುವುದಕ್ಕೆ ಬರಲೇಬೇಡಿ ಎಂದಿದ್ದಾರೆ.

    ಇನ್ನು ವಿಡಿಯೋ ಮಾಡಿದ ಮೂವರು ಹುಡುಗಿಯರಲ್ಲಿ ಓರ್ವ ಹುಡುಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದವಳಾದ್ದರಿಂದ ವಿಡಿಯೋ ಹೆಚ್ಚು ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲೂ ಹುಡುಗಿಯರಿಗೆ ತೀವ್ರ ಖಂಡನೆಗಳು ವ್ಯಕ್ತವಾಗುತ್ತಿವೆ. ನಾವು ನಮ್ಮ ಪ್ರಾರ್ಥನೆ ಸಲ್ಲಿಸಲು ಕೊಡಗಿನ ತಲಕಾವೇರಿಗೆ ಬಂದಿದ್ದೇವೆ. ದರ್ಶನ ಮುಗಿಸಿ ಗೇಟ್ ಬಳಿ ‘ರೀಲ್’ ವಿಡಿಯೋ ಮಾಡಿದೆವು. ಇದು ತಪ್ಪಾಗಿದೆ, ದಯವಿಟ್ಟು ನಮ್ಮನ್ನು ಕ್ಷಮಿಸಿ. ನಾವು ಕಾವೇರಿ ಅಮ್ಮನ ಭಕ್ತರು. ಅರಿವಿಲ್ಲದೆ ನಾವು ಇದನ್ನು ಮಾಡಿದ್ದೇವೆ. ಕಾವೇರಿ ಅಮ್ಮನ ಸಹಿತ ನಾವು ಎಲ್ಲರ ಕ್ಷಮೆಯನ್ನು ಕೋರುತ್ತೇವೆ” ಎಂದು ಹುಡುಗಿಯೊಬ್ಬಳು ಕ್ಷಮೆಯಾಚನೆಯ ವಿಡಿಯೋದಲ್ಲಿ ಹೇಳಿದ್ದಾಳೆ. (ಏಜೆನ್ಸೀಸ್​)

    ಇದು ಹೊಸ ಮಾಫಿಯಾ; ಎರಡು ವರ್ಷದ ಬಳಿಕ ಹೊಸ ಹೇರ್ ಸ್ಟೈಲ್

    ಆಶಿಕಾ ಚಿತ್ರೋತ್ಸವ; ಎಂಜಾಯ್ ಮಾಡೋಕೂ ಸಮಯ ಇಲ್ಲ…

    ಕಾಸ್ಟ್ಲಿ ಪ್ರಭಾಸ್!; ಒಂದು ಚಿತ್ರಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts