More

    ಆಶಿಕಾ ಚಿತ್ರೋತ್ಸವ; ಎಂಜಾಯ್ ಮಾಡೋಕೂ ಸಮಯ ಇಲ್ಲ…

    ಆಶಿಕಾ ಅಭಿನಯದ ಎರಡು ಚಿತ್ರಗಳು ಒಂದು ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಆದರೆ, ಆಶಿಕಾಗೆ ಮಾತ್ರ ಎಂಜಾಯ್ ಮಾಡುವುದಕ್ಕೇ ಸಮಯವಿಲ್ಲವಂತೆ. ಕಾರಣ ಸತತ ಕೆಲಸ. ಹೈದರಾಬಾದ್​ನಲ್ಲಿ ತೆಲುಗು ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಆಶಿಕಾ, ‘ಮದಗಜ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅದನ್ನು ಮುಗಿಸಿಕೊಂಡು ಹೈದರಾಬಾದ್ ಫ್ಲೈಟ್ ಹತ್ತಿದರೆ, ಮುಂದಿನ ವಾರ ‘ಅವತಾರ ಪುರುಷ’ ಬಿಡುಗಡೆಯ ಸಂದರ್ಭದಲ್ಲಿ ಮತ್ತೆ ಬೆಂಗಳೂರಿಗೆ ಇನ್ನೊಂದು ವಿಸಿಟ್. ಪ್ರಚಾರ, ಶೂಟಿಂಗ್ ಹೀಗೆ ಎರಡನ್ನೂ ನಿಭಾಯಿಸುವ ಕುರಿತು ಮಾತನಾಡುವ ಅವರು, ‘ಬಿಡುಗಡೆ ನಮ್ಮ ಕೈಯಲ್ಲಿರುವುದಿಲ್ಲ. ನವೆಂಬರ್​ನಲ್ಲಿ ‘ಅವತಾರ ಪುರುಷ’ ಬಿಡುಡೆಯಾಗಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಆಗ ನನ್ನ ಡೇಟ್ ಖಾಲಿ ಇತ್ತು. ಈಗ ಡಿಸೆಂಬರ್​ನಲ್ಲಿ ತೆಲುಗು ಚಿತ್ರಕ್ಕೆ ಕೊಟ್ಟಿದ್ದೇನೆ. ಚಿತ್ರದ ಪ್ರಚಾರ ಎಂದರೆ ಅವರು ಕಳಿಸಬಹುದು. ಆದರೆ, ನನಗೇ ಈ ಖುಷಿಯನ್ನು ಎಂಜಾಯ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎರಡು ಸಿನಿಮಾಗಳು ಒಂದೇ ವಾರದ ಅಂತರದಲ್ಲಿ ಬಿಡುಗಡೆ ಎಂದರೆ ಸ್ಪರ್ಧೆ ಅಂತಲೇ ಅರ್ಥ. ಎರಡೂ ಚಿತ್ರಗಳಲ್ಲಿ ನಾನು ಇರುವುದರಿಂದ ಜನರಿಗೂ, ಯಾವ ಚಿತ್ರದಲ್ಲಿ ನೋಡಬೇಕು ಎಂಬ ಗೊಂದಲ ಇರುತ್ತದೆ. ಪ್ರಚಾರದ ವಿಷಯ ಬಂದರೆ ಅದೂ ಕಷ್ಟವಾಗುತ್ತದೆ’ ಎನ್ನುತ್ತಾರೆ ಆಶಿಕಾ.

    ಆಶಿಕಾ ನೈಜತೆಗೆ ಹತ್ತಿರವಾದಂತಹ ಪಾತ್ರವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಅದು ‘ಮದಗಜ’ದಲ್ಲೂ ಮುಂದುವರಿದಿದೆಯಂತೆ. ‘ಈಗಿನ ಕಾಲಘಟ್ಟವೇ ಹಾಗಿದೆ. ಹೆಚ್ಚೇನೋ ಮಾಡಿದರೆ ಜನ ಇಷ್ಟಪಡುವುದಿಲ್ಲ. ಏನೇ ಪಾತ್ರವಾದರೂ ನೈಜತೆಗೆ ಹತ್ತಿರವಿದ್ದರೆ ಇಷ್ಟಪಡುತ್ತಾರೆ. ಈ ಚಿತ್ರದಲ್ಲಿ ನಾನು ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಾಮಾನ್ಯವಾಗಿ, ಹಳ್ಳಿಹುಡುಗಿಯನ್ನು ಸಿನಿಮಾಗಳಲ್ಲಿ ತೋರಿಸುವ ರೀತಿಯೇ ಬೇರೆ. ಯಾವ ರೀತಿ ಮಾಡಿದರೆ ಚೆಂದ ಎಂದು ನಿರ್ದೇಶಕರ ಜತೆಗೆ ಚರ್ಚೆ ನಡೆಸಿದೆ. ಓದಿರುವ ಹುಡುಗಿಯಾಗಿರುವುದರಿಂದ ‘ಹೋಗ್ಲಾ, ಬಾರ್ಲಾ’ ಅಂತೆಲ್ಲ ತೋರಿಸಿದರೆ ಚೆನ್ನಾಗಿರುವುದಿಲ್ಲ. ಈಗಿನ ಹಳ್ಳಿಹುಡುಗಿಯರು ಹಾಗೆ ಮಾತನಾಡುವುದಿಲ್ಲ. ಅವರಿಗೂ ಸ್ಟೈಲ್ ಇರುತ್ತದೆ. ಇವಳು ನಮ್ಮ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವವಳು. ಅದಕ್ಕೆ ಪೂರಕವಾಗಿ ಪಾತ್ರ ರೂಪುಗೊಂಡಿದೆ’ ಎಂಬುದು ಆಶಿಕಾ ಅಭಿಪ್ರಾಯ.

    ಈ ಮಧ್ಯೆ, ಆಶಿಕಾ ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣವೂ ಪ್ರಾರಂಭವಾಗಿದೆಯಂತೆ. ‘ಪುನೀತ್ ಸರ್ ಬ್ಯಾನರ್​ನಲ್ಲಿ ‘ಓ2’ ಎಂಬ ಸಿನಿಮಾ ಮಾಡುತ್ತಿದ್ದೀನಿ. ಇದೊಂದು ಮೆಡಿಕಲ್ ಥ್ರಿಲ್ಲರ್ ಚಿತ್ರ. ನಾಯಕಿ ಪ್ರಧಾನ ಚಿತ್ರ ಎಂದರೆ ಅಲ್ಲಿ ನಾಯಕಿ ಶೋಷಿತಳಾಗಿರುತ್ತಾಳೆ ಅಥವಾ ಶೋಷಣೆಯ ವಿರುದ್ಧ ಹೋರಾಡುತ್ತಾಳೆ. ಆದರೆ, ಇಲ್ಲಿ ಹಾಗಿಲ್ಲ. ಇಲ್ಲಿ ಅವಳೇ ಹೀರೋ ತರಹ. ಲಾಕ್​ಡೌನ್ ನಂತರ ಚಿತ್ರೀಕರಣ ಪ್ರಾರಂಭವಾಗಿದೆ. ಇದಲ್ಲದೆ ಮೈತ್ರಿ ಮೂವಿ ಮೇಕರ್ಸ್ ನಿರ್ವಣದ ತೆಲುಗು ಚಿತ್ರ ಮತ್ತು ಅಥರ್ವ ಅಭಿನಯದ ತಮಿಳು ಚಿತ್ರದಲ್ಲೂ ನಟಿಸುತ್ತಿದ್ದೇನೆ’ ಎಂದು ಮಾಹಿತಿ ಕೊಡುತ್ತಾರೆ. ಹಾಗೆಯೇ, ‘ದ್ವಿತ್ವ’ ಚಿತ್ರದಲ್ಲಿ ಪುನೀತ್ ಜತೆಗೆ ನಟಿಸಬೇಕಾಗಿದ್ದ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದರ ಬಗ್ಗೆ ಬೇಸರದಿಂದ ಹೇಳಿಕೊಳ್ಳುತ್ತಾರೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts