

ತಿರುವನಂತಪುರಂ: ಮಲಯಾಳಂ ನಟಿ ಸಾಧಿಕ ವೇಣುಗೋಪಾಲ್ ಅವರ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬೆತ್ತಲೆ ಚಿತ್ರಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಅನಾಮಿಕರೊಬ್ಬರು ಕರೆ ಮಾಡಿ ತಿಳಿಸಿದ ಬಳಿಕ ಇನ್ಸ್ಟಾಗ್ರಾಂ ನೋಡಿದ ನಟಿ ಸಾಧಿಕಾ ಅವರು ತಕ್ಷಣ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, ಸಾಧಿಕಾ ಅವರು ಇತ್ತೀಚೆಗೆ ದೂರವಾಣಿ ಕರೆಯೊಂದನ್ನು ಸ್ವೀಕರಿಸುತ್ತಾರೆ. ಫೋನ್ನಲ್ಲಿ ಆ ಕಡೆಯಿಂದ ಮಾತನಾಡುವ ವ್ಯಕ್ತಿ ನೀವು ಬೆತ್ತಲೆ ಚಿತ್ರವನ್ನು ಹೊರತುಪಡಿಸಿ ಉಳಿದೆಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಯಸುತ್ತೇವೆ ಎನ್ನತ್ತಾನೆ. ಇದನ್ನು ಕೇಳಿದ ಸಾಧಿಕಾಗೆ ಒಂದು ಕ್ಷಣ ಶಾಕ್ ಆಗುತ್ತದೆ. ನಾನೆಂದಿಗೂ ಇನ್ಸ್ಟಾಗ್ರಾಂನಲ್ಲಿ ತುಂಬಾ ಮೈಮಾಟ ಕಾಣುವಂತ ಪೋಸ್ಟ್ ಮಾಡುವುದಿಲ್ಲ. ನಾನು ಹೇಗೆ ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಲು ಸಾಧ್ಯ ಎಂದು ಕರೆ ಮಾಡಿದವನನ್ನು ಸಾಧಿಕಾ ಪ್ರಶ್ನಿಸಿದ್ದಾರೆ.
ಇದಾದ ಬಳಿಕ ದೂರವಾಣಿ ಕರೆ ಮಾಡಿದಾತ ಸಾಧಿಕಾಗೆ ಲಿಂಕ್ ಒಂದನ್ನು ಶೇರ್ ಮಾಡುತ್ತಾನೆ. ಖಾತೆ ನಿಮ್ಮ ಹೆಸರಿನಲ್ಲಿದೆ ಮತ್ತು ನಿಮ್ಮ ಫೋಟೋಗಳಿವೆ ಎಂದು ಹೇಳುತ್ತಾನೆ. ನಟಿ ಲಿಂಕ್ ಓಪನ್ ಮಾಡಿದ ಕೂಡಲೇ ಆಘಾತವಾಗುತ್ತದೆ. ಅದರಲ್ಲಿ ಎಡಿಟ್ ಮಾಡಲಾದ ಬೆತ್ತಲೇ ಫೋಟೋಗಳಿರುತ್ತವೆ.
ಗಮನಕ್ಕೆ ಬಂದ ತಕ್ಷಣ ಸಾಧಿಕಾ ಕೇರಳ ಸೈಬರ್ ಕ್ರೈಂ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಐಪಿ ಅಡ್ರೆಸ್ನ ಆಧಾರದ ಮೇಲೆ ಪ್ರಬುದ್ಧಿ ಎಂಬಾತನನ್ನು ಬಂಧಿಸಿದ್ದಾರೆ. ಆದಾಗ್ಯೂ ಪ್ರಕರಣವನ್ನು ಹಿಂಪಡೆದುಕೊಂಡಿರುವ ಸಾಧಿಕಾ ಈ ರೀತಿಯ ದುಷ್ಕೃತ್ಯವೆಸಗಿ ನಮ್ಮ ವೃತ್ತಿ ಜೀವನವನ್ನು ಹಾಳು ಮಾಡಬೇಡಿ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ನಟಿ ಶೇರ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)