ಮೀನುಗಾರನ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ ಅಪರೂಪದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!

Rare Fish
Published on

ಇಸ್ಲಮಾಬಾದ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರ ಬಲೆಗೆ ಅಪರೂಪದ "ಕಾಟ್ಚಿಲಿ ಫಿಶ್​" ಬಿದ್ದಿದೆ. ಇದನ್ನು ಕೊಳ್ಳಲು ಅನೇಕರು ಪೈಪೋಟಿಗೆ ಬಿದ್ದಿದ್ದು, ಕೊನೆಗೆ ಕಾಕಿನಾಡು ಬಂದರು ಏರಿಯಾದ ದಾರಕೊಂಡ ಎಂಬುವರು ಬರೋಬ್ಬರಿ 2.40 ಲಕ್ಷಕ್ಕೆ ಮೀನನ್ನು ಖರೀದಿಸಿದ್ದಾರೆ.

ಮೀನು ಜಾತಿಗಳಲ್ಲಿ ಕಾಟ್ಚಿಲಿ ಫಿಶ್​ ತುಂಬಾ ಅಪರೂಪದ ಮೀನು. ಈ ಮೀನಿನ ಹೊಟ್ಟೆಯ ಭಾಗಗಳನ್ನು ಔಷಧಿ ತಯಾರಿಸಲು ಬಳಸುತ್ತಾರೆ. ಹೀಗಾಗಿ ಇದಕ್ಕೆ ಬಾರಿ ಬೇಡಿಕೆ ಇದೆ. ಇದೀಗ ಕಾಟ್ಚಿಲಿ ಫಿಶ್​ ಹಿಡಿದಿರುವುದು ಪಶ್ಚಿಮ ಗೋದಾವರಿಯಲ್ಲಿ ಭಾರೀ ಸುದ್ದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net