ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಎಷ್ಟು ದಿನ? ಇಲ್ಲಿದೆ ಕುತೂಹಲಕರ ಮಾಹಿತಿ

BBK8
Published on

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ತನ್ನ 8ನೇ ಆವೃತ್ತಿಯನ್ನು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸಿ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ನಾಳೆಯಿಂದ ಬಿಗ್​ಬಾಸ್ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ.

ಅರ್ಧಕ್ಕೆ ನಿಂತು ಮತ್ತೆ ಪ್ರಾರಂಭವಾದ ಏಕೈಕ ರಿಯಾಲಿಟಿ ಶೋ ಎಂಬ ಹೆಸರಿಗೆ ಬಿಗ್​ಬಾಸ್​ ಕನ್ನಡ ಪಾತ್ರವಾಗಿದ್ದು, ಇಂಡಿಯನ್​ ಟೆಲಿವಿಷನ್​ ಇತಿಹಾಸದಲ್ಲಿ ಬಿಗ್​ಬಾಸ್​ ಹೊಸ ಇತಿಹಾಸ ಬರೆದಿದೆ. ನಾಳೆಯಿಂದ ಶೋ ಏನೋ ಮತ್ತೆ ಆರಂಭವಾಗುತ್ತದೆ. ಆದರೆ, ಎರಡನೇ ಇನ್ನಿಂಗ್ಸ್​ ಎಷ್ಟು ದಿನಗಳವರೆಗೆ ನಡೆಯಲಿದೆ ಎಂಬ ಕುತೂಹಲ ಜನರಲ್ಲಿದೆ.

ಈ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಮತ್ತಷ್ಟು ವಾರಗಳ ಕಾಲ ಎರಡನೇ ಇನ್ನಿಂಗ್ಸ್​ ವಿಸ್ತರಿಸಲು ಕಲರ್ಸ್​ ಕನ್ನಡ ನಿರ್ಧರಿಸಿದೆ ಎಂಬ ಮಾಹಿತಿ ಇದೆ. ಸಾಮಾನ್ಯವಾಗಿ ಬಿಗ್​ಬಾಸ್​ 100 ದಿನಗಳ ಕಾಲ ನಡೆಯಲಿದೆ. ಈಗಾಗಲೇ 75 ದಿನಗಳ ಕಾಲ ಶೋ ನಡಿದಿದ್ದು, ಇನ್ನು 25 ದಿನಗಳು ಮಾತ್ರ ಉಳಿದಿತ್ತು. ಆದರೆ, ವೀಕ್ಷಕರಿಗೆ ನಿರಾಸೆ ಆಗದಿರಲು 50 ದಿನಗಳ ಕಾಲ ನಡೆಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.

ಇದಲ್ಲದೆ, ವೀಕ್ಷಕರಿಗೆ ಎರಡನೇ ಇನ್ನಿಂಗ್ಸ್​ನಲ್ಲಿ ಕೆಲವು ಸರ್ಪ್ರೈಸ್​ಗಳು ಕಾದಿವೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಮತ್ತಷ್ಟು ಮಂದಿಯನ್ನು ಬಿಗ್​ ಮನೆಯೊಳಗೆ ಸೇರಿಸಲು ಚಿಂತನೆ ನಡೆದಿದೆ. ಒಂದು ವೇಳೆ ಇದೆಲ್ಲವೂ ನಿಜವಾದರೆ, ಇನ್ನುಷ್ಟು ದಿನಗಳ ಕಾಲ ಬಿಗ್​ಬಾಸ್​ ಮನರಂಜನೆಯನ್ನು ಜನರು ಕಣ್ತುಂಬಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net