ದಾಖಲೆಯತ್ತ ಸಾಗಿದ ಅಲ್ಲು ಅರ್ಜುನ್​ 'ಪುಷ್ಪ-2' ಲಿರಿಕಲ್ ಹಾಡು! 15 ರಾಷ್ಟ್ರಗಳಲ್ಲಿ ಟ್ರೆಂಡಿಂಗ್​

WhatsApp Image 2024-05-02 at 7.56.26 PM
Published on

ಆಂಧ್ರಪ್ರದೇಶ: ಸುಕುಮಾರ್​ ನಿರ್ದೇಶನದ ಟಾಲಿವುಡ್​ನ ಐಕಾನ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್​ ಅಭಿನಯದ ಬಹುನಿರೀಕ್ಷಿತ, ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ-2' ರಿಲೀಸ್​ಗೆ ಸದ್ಯ ಕಾತರದಿಂದ ಕಾಯುತ್ತಿರುವ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರತಂಡ ಸಿನಿಮಾದ ಮೊದಲ ಸಿಂಗಲ್​ ರಿಲೀಸ್​ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಈ ಲಿರಿಕಲ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

'ಪುಷ್ಪಾ...ಪುಷ್ಪಾ' ಲಿರಿಕಲ್​ ಹಾಡು ನಿನ್ನೆಯಷ್ಟೇ ರಿಲೀಸ್​ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಾಖಲೆಯತ್ತ ಸಾಗುತ್ತಿದೆ. ಈ ಹಾಡನ್ನು ಸಂಯೋಜಿಸಿರುವ ದೇವಿಶ್ರೀ ಪ್ರಸಾದ್​ಗೆ ಸದ್ಯ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದೀರಾ ಎಂದು ತಿಳಿಸಿದ್ದಾರೆ. ಯೂಟ್ಯೂಬ್​ನಲ್ಲಿ ಹಿಂದೆಂದೂ ನೋಡದ ದಾಖಲೆಯನ್ನು ನಿರ್ಮಿಸುತ್ತಿರುವ ಪುಷ್ಪಾ ಸಾಂಗ್, 40 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಟ್ಟು 6 ಭಾಷೆಗಳಿಂದ 1.27ಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ.

ಕೇವಲ 24 ಗಂಟೆಯೊಳಗೆ ಅತೀ ಹೆಚ್ಚು ವೀಕ್ಷಣೆ ಪಡೆದ ಲಿರಿಕಲ್ ವಿಡಿಯೋ ಎಂಬ ಹೆಗ್ಗಳಿಕೆಗೆ ಈ ಹಾಡು ಪಾತ್ರವಾಗಿದ್ದು, ಸದ್ಯದ ಮಟ್ಟಿಗೆ 15 ರಾಷ್ಟ್ರದಲ್ಲಿ ಪುಷ್ಪಾ..ಪುಷ್ಪಾ ಹಾಡು ಟ್ರೆಂಡಿಂಗ್​ನಲ್ಲಿದೆ ಎಂದು ವರದಿಯೊಂದು ಮಾಹಿತಿ ಹಂಚಿಕೊಂಡಿದೆ. ಆಗಸ್ಟ್​ 15ರಂದು ಜಾಗತಿಕ ಮಟ್ಟದಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್​ ಸಿಗಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net