ಬಂಗಾರದ ಮನುಷ್ಯನನ್ನು ನೆನೆದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​..

WhatsApp Image 2020-05-09 at 12.50.14 PM
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಎಂದು ಪರಿಗಣಿಸಲ್ಪಡುವ ಡಾ. ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಮೊನ್ನೆ ಮೊನ್ನೆಯಷ್ಟೇ 48 ವರ್ಷ ತುಂಬಿತ್ತು. ಇದೀಗ ಇದೇ ‘ಬಂಗಾರದ ಮನುಷ್ಯ’ನನ್ನು ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ನೆನೆಪು ಮಾಡಿಕೊಂಡಿದ್ದಾರೆ.

ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್​ ಗೌಡ ಅವರೊಟ್ಟಿಗೆ ಡಾ. ರಾಜ್​ಕುಮಾರ್​ ಇರುವ ಬ್ಲಾಕ್​ ಆ್ಯಂಡ್ ವೈಟ್​ ಫೋಟೋವನ್ನು ಪುನೀತ್​ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದು, ಚಿತ್ರದ ಮುಹೂರ್ತದ ವೇಳೆ ತೆಗೆದ ಮೊದಲ ದೃಶ್ಯ ಇದಾಗಿದೆ. ಆ ಫೋಟೋಕ್ಕೆ ಹಿನ್ನೆಲೆಯಲ್ಲಿ ನಗು ನಗುತಾ ನಲಿ ನಲಿ ಟ್ಯೂನ್​ ಸಹ ಕಿವಿಗೆ ಮುದ ನೀಡುತ್ತದೆ.

1972ರ ಮಾರ್ಚ್ 31ರಂದು ರಾಜ್ಯಾದ್ಯಂತ ‘ಬಂಗಾರದ ಮನುಷ್ಯ’ ಬಿಡುಗಡೆಯಾಗಿತ್ತು. ಡಾ. ರಾಜಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಣ್ ಮತ್ತು ಗೋಪಾಲ್ ನಿರ್ಮಿಸಿದ್ದ ಈ ಚಿತ್ರವನ್ನು ಸಿದ್ಧಲಿಂಗಯ್ಯ ನಿರ್ದೇಶನ ಮಾಡಿದ್ದರು. ಡಾ. ರಾಜಕುಮಾರ್, ಭಾರತಿ, ಬಾಲಕೃಷ್ಣ, ವಜ್ರಮುನಿ, ಶ್ರೀನಾಥ್, ಎಂ.ಪಿ. ಶಂಕರ್, ಆರತಿ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net