

ಬೆಂಗಳೂರು: ಇಂದು ಬೆಳಗ್ಗೆ ರಾಜ್ಯಾದ್ಯಂತ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಆರಂಭವಾಯಿತು. ಪರೀಕ್ಷೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ದೈಹಿಕ ಅಂತರ ಮರೆತು ಗುಂಪುಗುಂಪಾಗಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.
ಪರೀಕ್ಷೆ ಬರೆಯುವ ಧಾವಂತದಲ್ಲಿ ದೈಹಿಕ ಅಂತರ ಮರೆತ ವಿದ್ಯಾರ್ಥಿಗಳು ಕರೊನಾ ಭೀತಿಯನ್ನು ಲೆಕ್ಕಿಸಲಿಲ್ಲ. ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿದ ಬಳಿಕ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ಮಾಡಲಾಯಿತು. ಇದನ್ನೂ ಓದಿರಿ ವಿಶ್ವನಾಥ್ಗೆ ಟಿಕೆಟ್ ಕೈತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ…
ಗದಗ ನಗರದ ಜೆಟಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವೇಳೆ ಇಬ್ಬರು ವಿದ್ಯಾರ್ಥಿಗಳಿಗೆ ಹೈ ಟೆಂಪ್ರೆಚರ್ ಕಂಡುಬಂದಿದ್ದರಿಂದ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆಗೆ ಕೂರಿಸಲಾಯಿತು.
ಮಾರ್ಚ್ನಲ್ಲೇ ಮುಗಿಯಬೇಕಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಕರನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಬಹುನಿರೀಕ್ಷಿತ ಪರೀಕ್ಷೆಗೆ ಇಂದು ಕಾಲಕೂಡಿಬಂತು.
ಇದನ್ನೂ ಓದಿರಿ ಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್ ಗಳಗಳನೇ ಅತ್ತಿದ್ದೇಕೆ?