ವಿಶ್ವನಾಥ್​ಗೆ ಟಿಕೆಟ್ ಕೈತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ...

vishwanath
Published on

ಬೆಂಗಳೂರು: ನನಗೆ ಟಿಕೆಟ್ ಕೈ ತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಪಕ್ಷದ ಒಳಗಡೆ ಹಾಗೂ ಹೊರಗಡೆ ಪಿತೂರಿ ನಡೆದಿದ್ದು, ಇದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ಪರಿಷತ್​ ಚುನಾವಣೆಯ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೆಸರನ್ನು ತಳುಕುಹಾಕಿದ ವಿಶ್ವನಾಥ್, ಹೊರಗಡೆ ವಿರೋಧಿಗಳ ಪಾತ್ರವೂ ಇದೆ ಎಂದರು. ಇದನ್ನೂ ಓದಿರಿ ಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್​ ಗಳಗಳನೇ ಅತ್ತಿದ್ದೇಕೆ?

ನಿಮಗೆ ಟಿಕೆಟ್ ಕೊಡುವುದಕ್ಕೆ ಪಕ್ಷದಲ್ಲೇ ಕೆಲವರ ಅಸಮಾಧಾನವಿತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ನನ್ನ ವಿರುದ್ಧ ದೊಡ್ಡ ಷಡ್ಯಂತ್ರವೇ ನಡೆದಿದೆ. ಅದರ ಮಾಹಿತಿ ನನ್ನ ಬಳಿಯಿದೆ. ಸೋತವರಿಗೆ ಟಿಕೆಟ್ ಕೊಡುವುದು ಮಾನದಂಡವಾಗಲ್ಲ. ಹಾಗೇ ಆಗಿದ್ದರೆ ಎಂಟಿಬಿಗೆ ಟಿಕೆಟ್ ನೀಡಲಾಗಿದೆ. ಎಂಟಿಬಿಗೆ ಟಿಕೆಟ್​ ನೀಡಿದ್ದಕ್ಕೆ ನನಗೆ ಬೇಸರವಿಲ್ಲ ಎಂದರು.

ನನಗೆ ಟಿಕೆಟ್ ಕೈ ತಪ್ಪುವ ನಿರೀಕ್ಷೆ ಇರಲಿಲ್ಲ. ಸಿಎಂ ಯಡಿಯೂರಪ್ಪ ಅವರು ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ, ಸಿಎಂ ಅವರು ಮಾತಿಗೆ ತಪ್ಪುವಂತೆ ಮಾಡಲು ಕೆಲವರ ಪ್ರಯತ್ನವಾಗಿದೆ ಎಂದು ಆಕ್ರೋಶ ಹೊರಹಾಕಿದರು. ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಆಕಾಶವೇನೂ ಕಳಚಿ ಬಿದ್ದಿಲ್ಲ. ಎಂಟಿಬಿ ಹಾಗೂ ಶಂಕರ್​ಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.

ಮೇಲ್ಮನೆ ಟಿಕೆಟ್ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಎಚ್. ವಿಶ್ವನಾಥ್ ಇಂದು(ಗುರುವಾರ) ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net