

ಬೆಂಗಳೂರು: ಪರಿಷತ್ ಚುನಾವಣೆಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಬಿ ಫಾರಂ ಪಡೆಯಲು ಬಿಜೆಪಿ ಕಚೇರಿಗೆ ಆಗಮಿಸಿದ್ದ ಆರ್. ಶಂಕರ್ ಕಣ್ಣೀರು ಹಾಕುತ್ತ ಅತ್ತ ಪ್ರಸಂಗ ನಡೆಯಿತು.
ಕ್ಷೇತ್ರದ ಜನ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಜನ ನನ್ನನ್ನು ವಿಶ್ವಾಸದಿಂದ ಪಕ್ಷೇತರರಾಗಿ ಗೆಲ್ಲಿಸಿದ್ರು. ಅಂಥ ಕ್ಷೇತ್ರವನ್ನೇ ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಧಾರೆ ಎರೆದೆ. ಮತ್ತೆ ಕ್ಷೇತ್ರದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ ಎನ್ನುತ್ತಲೇ ಭಾವುಕರಾದ ಶಂಕರ್ ಅವರ ಕಣ್ಣಲ್ಲಿ ನೀರು ಬಂತು. ಇದನ್ನೂ ಓದಿರಿ ವಿಶ್ವನಾಥ್ಗೆ ಟಿಕೆಟ್ ಕೈತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ…
ಕಣ್ಣೀರು ಹಾಕಿತ್ತಲೇ ಗದ್ಗದಿತರಾಗಿ ಮಾತಾಡಿದ ಶಂಕರ್, ಸಿಎಂ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಿಎಂ. ರಾಜ್ಯಾಧ್ಯಕ್ಷರು, ಬಿಜೆಪಿ ವರಿಷ್ಠರು, ಹೈಕಮಾಂಡ್ಗೆ ಅಭಿನಂದನೆ ಸಲ್ಲಿಸ್ತೇನೆ ಎಂದರು.