ಸೊಸೆಗೆ ಗುಂಡಿಕ್ಕಿದ ಮಾವ! ಕಾರಣ ಏನು ಗೊತ್ತಾ?

Shootout
Published on

ಮಡಿಕೇರಿ: ತನ್ನ ಸೊಸೆಯನ್ನು ಕೊಲ್ಲಲ್ಲು ಮಾವನೇ ಗುಂಡಿಕ್ಕಿರುವ ಘಟನೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಬೆಟ್ಟದಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.

ಹಸುವನ್ನು ಬಾಣೆಯಲ್ಲಿ ಕಟ್ಟುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಾವ- ಸೊಸೆ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೋಪಗೊಂಡ ಮಾವ ಅಯ್ಯಪ್ಪ ತನ್ನ ಸೊಸೆ ತೀರ್ಥ (36) ಅವರ ಮೇಲೆ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾನೆ.

ಮಾವ ಹಾರಿಸಿದ ಬಂದೂಕಿನ ಗುಂಡು ಸೊಸೆಯ ಎದೆಭಾಗ ಹಾಗೂ ತೋಳಿ ತಾಗಿದ್ದು, ಗಾಯವಾಗಿದೆ. ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದ್ದಂತೆ ನನ್ನ ತಂದೆ ಅಯ್ಯಪ್ಪ, ತಾಯಿ ಸೀತಮ್ಮ, ಸಹೋದರಿಯರಾದ ಗುಣ, ಪ್ರತೀಮಾ ಅವರು ನನ್ನ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಇದೇ ವಿಚಾರವಾಗಿ ಗುರುವಾರ ನನ್ನ ಪತ್ನಿ ಮೇಲೆ ಅಯ್ಯಪ್ಪ ಗುಂಡು ಹಾರಿಸಿದ್ದಾರೆ ಎಂದು ತೀರ್ಥರ ಪತಿ ಹೂವಯ್ಯ ಸೋಮವಾರಪೇಟೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ. ಆರೋಪಿ ಅಯ್ಯಪ್ಪ ತಲೆಮರೆಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net