More

    ಹಾಡಹಗಲೇ ಅಪರಿಚಿತರ ಮನೆಗೆ ನುಗ್ಗಿದ್ದ ಹರೆಯದ ಯುವಕರು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು!

    ತುಮಕೂರು: ಹಾಡಹಗಲೇ ನಗರದ ಮನೆಯೊಂದರಲ್ಲಿ ದರೋಡೆ ಮಾಡಿದ್ದ ಕುಖ್ಯಾತ ರೌಡಿ ರೋಹಿತ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

    ಅ.20 ರಂದು ವಾಲ್ಮೀಕಿನಗರದ ನಿವಾಸಿ ವಿಶ್ವೇಶ್ವರ ಆರಾಧ್ಯ ಹಾಗೂ ಅವರ ಪತ್ನಿ ಪ್ರೇಮಕುಮಾರಿ ಆಗಿನ್ನೂ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಮಧ್ಯಾಹ್ನ 3.30ಕ್ಕೆ ಮಚ್ಚು, ಲಾಂಗ್, ಡ್ರ್ಯಾಗನ್ ಹಿಡಿದು ಒಳನುಗ್ಗಿದ 6 ಜನರಿದ್ದ ತಂಡವು ಒಟ್ಟು 5.87ಲಕ್ಷ ರೂ. ಬೆಲೆ ಬಾಳುವ 4 ಚಿನ್ನದ ಬಳೆಗಳು, 72 ಸಾವಿರ ರೂ. ನಗದು ಹಾಗೂ ಎರಡು ಮೊಬೈಲ್ ಪೋನ್ ದೋಚಿ ಪರಾರಿಯಾಗಿದ್ದರು.

    ಈ ಕೃತ್ಯ ಎಸಗಿದ್ದ 6 ಜನರ ದುಷ್ಕರ್ಮಿಗಳಿಗೆ ಸಹಕರಿಸಿದ್ದ ಇನ್ನೂ ನಾಲ್ವರು ಸೇರಿ ಒಟ್ಟು 10 ಡಕಾಯಿತಿರನ್ನು ಹೊಸ ಬಡಾವಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ನಗರದ ಜನತಾ ಕಾಲೋನಿಯ ರೋಹಿತ(20), ಅಶೋಕನಗರದ ಮನೂಜ್‌ಕುಮಾರ(21), ಗಂಗೋತ್ರಿನಗರದ ಕೆ.ಆರ್.ರಾಘವೇಂದ್ರ(21), ಹೆಬ್ಬೂರು ಹೋಬಳಿ ಚನ್ನಿಗಪ್ಪನಪಾಳ್ಯದ ಲೋಕೇಶ್(29), ಅಂತರಸನಹಳ್ಳಿ ಬೋವಿಪಾಳ್ಯದ ವೆಂಕಟೇಶ(20), ಕೆ.ಭರತ್‌ಕುಮಾರ್(21), ಶೆಟ್ಟಿಹಳ್ಳಿ ಮುಖ್ಯರಸ್ತೆಯ ಗಂಗಾಧರ್(21), ಜಿ.ಎಚ್.ಪವನ್(24), ಮಾರುತಿನಗರದ ಟಿ.ಜಿ.ಸಂತೋಷ(21) ಹಾಗೂ ಎಸ್‌ಐಟಿ ಬಡಾವಣೆಯ ಪವನ್‌ಕುಮಾರ್(21) ಬಂಧಿತರು.

    ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ರೌಡಿ ಜನತಾ ಕಾಲನಿಯ ರೋಹಿತ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ಹರೆಯದ ಯುವಕರು ಐಷರಾಮಿ ಜೀವನ ನಡೆಸುವ ಸಲುವಾಗಿ ಇಂತಹ ದುಷ್ಕೃತ್ಯ ಮಾಡಲು ಮುಂದಾಗಿರುವುದಾಗಿ ವಿಚಾರಣೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ.

    ಮಾವ-ಸೊಸೆ ನಡುವೆ ಅಕ್ರಮ ಸಂಬಂಧ, ಗುಟ್ಟು ರಟ್ಟಾಗುತ್ತಿದ್ದಂತೆ ನಡೆಯಿತು ಭೀಕರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts