

ಅಮೆರಿಕಾ: ಜಾಗತಿಕ ಜನಸಂಖ್ಯೆ ಎಷ್ಟಿರಬಹುದು ಎಂಬ ಲೆಕ್ಕಾಚಾರಗಳು ನಮ್ಮಲ್ಲಿ ಆಗಾಗ್ಗೆ ಮೂಡುವುದು ಸಹಜ! ಆದ್ರೆ, ಇದಕ್ಕೆ ಉತ್ತರ ದೊರಕಿದರೂ ಸಹ, ಆ ಉತ್ತರದಲ್ಲಿ ವ್ಯತ್ಯಾಸ ಕಂಡಬರುವುದು ಸಹಜವೇ ಸರಿ. ಪ್ರತಿದಿನ, ಪ್ರತಿಕ್ಷಣ ಜಗತ್ತಿನಲ್ಲಿ ಹುಟ್ಟುವವರ ಸಂಖ್ಯೆಯ ಜತೆಗೆ ಮರಣ ಹೊಂದುವವರ ಸಂಖ್ಯೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.
ಇದನ್ನೂ ಓದಿ: ಕಾಯಂ ಶಿಕ್ಷಕರ ನೇಮಕಕ್ಕೆ ಗ್ರಾಮಸ್ಥರ ಪಟ್ಟು
ಇಡೀ ಜಗತ್ತಿನ ಜನಸಂಖ್ಯೆ ತಿಳಿದುಕೊಳ್ಳುವ ಕುತೂಹಲವಿರುವ ನಮಗೆ, ನಮ್ಮ ದೇಶದ ಒಟ್ಟು ಜನಸಂಖ್ಯಾ ಸ್ಫೋಟ ಕೂಡ ಎಷ್ಟಿರಬಹುದು ಎಂಬ ಯೋಚನೆ ಇರುತ್ತದೆ. ಆದ್ರೆ, ಇತ್ತೀಚಿನ ವರದಿಯೊಂದು ಪ್ರಸಕ್ತ ವರ್ಷದ ಮಾಹಿತಿಯನ್ನೂ ಮೀರಿ 2100ನೇ ವರ್ಷಕ್ಕೆ ಪ್ರಪಂಚದ ಒಟ್ಟು ಜನಸಂಖ್ಯೆ ಎಷ್ಟಿರಲಿದೆ ಎಂಬ ಯೋಜಿತ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. 'ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್' ನೀಡಿದ ವರದಿ ಈ ಕೆಳಕಂಡಂತಿದೆ.
2100 ರಲ್ಲಿ ಯೋಜಿತ ಜನಸಂಖ್ಯೆ ಹೀಗಿರಲಿದೆ:
ಭಾರತ: 1,533 ಮಿಲಿಯನ್
ಚೀನಾ: 771M
ನೈಜೀರಿಯಾ: 546M
ಪಾಕಿಸ್ತಾನ: 487M
ಕಾಂಗೋ: 431M
ಅಮೆರಿಕಾ: 394M
ಇಥಿಯೋಪಿಯಾ: 323M
ಇಂಡೋನೇಷ್ಯಾ: 297M
ತಾಂಜಾನಿಯಾ: 244M
ಈಜಿಪ್ಟ್: 205M
ಬ್ರೆಜಿಲ್: 185M
ಫಿಲಿಪೈನ್ಸ್: 180M
ಬಾಂಗ್ಲಾದೇಶ: 177M
ನೈಜರ್: 166M
ಸುಡಾನ್: 142M
ಅಂಗೋಲಾ: 133M
ಉಗಾಂಡಾ: 132M
ಮೆಕ್ಸಿಕೋ: 116M
ಕೀನ್ಯಾ: 113M
ರಷ್ಯಾ: 112M
ಇರಾಕ್: 111M
ಅಫ್ಘಾನಿಸ್ತಾನ: 110M
ಮೊಜಾಂಬಿಕ್: 106M
ವಿಯೆಟ್ನಾಂ: 91M
ಕೋಟ್ ಡಿ'ಐವರಿ: 88M
ಕ್ಯಾಮರೂನ್: 87M
ಮಾಲಿ: 87M
ಮಡಗಾಸ್ಕರ್: 83M
ಟರ್ಕಿ: 82M
ಇರಾನ್: 79M
ದಕ್ಷಿಣ ಆಫ್ರಿಕಾ: 74M
ಯೆಮೆನ್: 74M
ಜಪಾನ್: 74M
ಯುಕೆ: 70M
ಜರ್ಮನಿ: 68M
ಫ್ರಾನ್ಸ್: 60M
ಕೆನಡಾ: 53M
ಸೌದಿ ಅರೇಬಿಯಾ: 50M
ಅರ್ಜೆಂಟೀನಾ: 47M
ಆಸ್ಟ್ರೇಲಿಯಾ: 38M
ಇಟಲಿ: 36M
ಸ್ಪೇನ್: 30M
ದಕ್ಷಿಣ ಕೊರಿಯಾ: 24M
ನೆದರ್ಲ್ಯಾಂಡ್ಸ್: 16M
ಯುಎಇ: 14M
ಸ್ವೀಡನ್: 13M
ಸ್ವಿಜರ್ಲ್ಯಾಂಡ್: 10M
ಆಸ್ಟ್ರಿಯಾ: 8M
ನಾರ್ವೆ: 7M
ಡೆನ್ಮಾರ್ಕ್: 7M
ಫಿನ್ಲ್ಯಾಂಡ್: 5M
ಸ್ಲೊವೇನಿಯಾ 1.6M, ಲಾಟ್ವಿಯಾ 0.95M, ಎಸ್ಟೋನಿಯಾ 0.83M, ಐಸ್ಲ್ಯಾಂಡ್ 0.37M ಇರಲಿದ್ದು, ವಿಶ್ವದ ಒಟ್ಟು ಜನಸಂಖ್ಯಾ ಸ್ಪೋಟ 10.25 ಬಿಲಿಯನ್ ಇರಲಿದೆ ಎಂದು ವರದಿ ಉಲ್ಲೇಖಿಸಿದೆ.