ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್​ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ

modi
Published on

ನವದೆಹಲಿ: ಭಾರತೀಯ ಸೇನೆಯ ಬಗ್ಗೆ ಅಪಾರ ಪ್ರೇಮವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ದೀಪಾವಳಿಯನ್ನು ಯೋಧರೊಂದಿಗೇ ಆಚರಿಸುತ್ತಾರೆ ಎನ್ನಲಾಗಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರತಿ ವರ್ಷ ಮೋದಿ ಅವರು ಯೋಧರೊಂದಿಗೇ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ.

ಈ ವರ್ಷ ದೀಪಾವಳಿಯನ್ನು ಮೋದಿ ಅವರು ಶನಿವಾರದಂದು ಗುಜರಾತ್​ನ ಯೋಧರೊಂದಿಗೆ ಆಚರಿಸಲಿದ್ದಾರೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಅವರು ಪ್ರಧಾನಿಯೊಂದಿಗೆ ಇರಲಿದ್ದಾರೆ. ಈ ವರ್ಷದ ಜೂನ್​ ತಿಂಗಳಲ್ಲಿ ಲಡಾಖ್​ ಭಾಗದಲ್ಲಿನ ಸೈನಿಕರನ್ನು ಭೇಟಿ ಮಾಡಿದ್ದ ಅವರು ವರ್ಷದಲ್ಲಿ ಎರಡನೇ ಬಾರಿಗೆ ಸೈನಿಕರೊಂದಿಗೆ ಕಾಲ ಕಳೆಯಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಹಬ್ಬದ ಆಚರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ದೀಪಾವಳಿಯನ್ನು ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಆಚರಿಸಿದ್ದರು. 2018ರಲ್ಲಿ ಉತ್ತರಾಖಂಡದ ಸೈನಿಕರೊಂದಿಗೆ, 2017ರಲ್ಲಿ ಕಾಶ್ಮೀರದ ಗುರೆಜ್​ ಸೆಕ್ಟರ್​ನ ಸೈನಿಕರೊಂದಿಗೆ ಹಬ್ಬ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net