More

    ಸ್ಯಾನಿಟರಿ ಪ್ಯಾಡ್​ನಲ್ಲಿ 62 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್​ ಸಾಗಿಸುತ್ತಿದ್ದ ಮಹಿಳೆಯರ ಬಂಧನ

    ಕೊಯಮತ್ತೂರು: ಚಪ್ಪಲಿ, ಕಾರಿನ ಸೀಟು, ಬೆಲ್ಟ್​ಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲಿಬ್ಬರು ಮಹಿಳೆಯರು ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್​ನಲ್ಲೇ ಚಿನ್ನವನ್ನು ಕಳ್ಳ ಸಾಗಣೆ ಮಾಡುವ ಪ್ರಯತ್ನ ಮಾಡಿದ್ದು, ಇದೀಗ ಕಸ್ಟಮ್ಸ್​ ಅಧಿಕಾರಿಗಳ ವಶವಾಗಿದ್ದಾರೆ.

    ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ

    ಇಂತದ್ದೊಂದು ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ದೇವಾಣಿ ರಾಧಾಕೃಷ್ಣನ್​ ಮತ್ತು ವಸಂತಿ ರಾಮಸ್ವಾಮಿ ಹೆಸರಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ 3.30ಕ್ಕೆ ಕೊಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್​ ಅರೇಬಿಯಾ ವಿಮಾನದಲ್ಲಿ ಬಂದಿಳಿದಿದ್ದಾರೆ. ಈ ಇಬ್ಬರು ಶಾರ್ಜಾದಿಂದ ಕೊಯಮತ್ತೂರಿಗೆ ಬಂದಿದ್ದಾರೆ ಎನ್ನಲಾಗಿದೆ.

    ಮೆಟಲ್​ ಡಿಟೆಕ್ಟರ್​ನಲ್ಲಿ ಪರಿಶೀಲನೆ ಮಾಡುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್​ನಲ್ಲಿ 62.46 ಲಕ್ಷ ರೂಪಾಯಿ ಮೌಲ್ಯದ 1.1956 ಕೆ.ಜಿ ಚಿನ್ನವನ್ನು ಪೇಸ್ಟ್​ ರೂಪದಲ್ಲಿ ಅವರು ಅಡಗಿಸಿಟ್ಟುಕೊಂಡಿದ್ದರು. ವಿಚಾರ ತಿಳಿದುಬರುತ್ತಿದ್ದಂತೆ ಕಸ್ಟಮ್ಸ್​ ಅಧಿಕಾರಿಗಳು ಮಹಿಳೆಯರನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ರಾಜೀವ್​ಗಾಂಧಿ ಆರೋಗ್ಯ ವಿವಿಯ ಕಾಲೇಜು ತೆರೆಯಲು ಡೇಟ್​ ಫಿಕ್ಸ್​

    ದೇವಾಣಿ ಚೆನ್ನೈ ಮೂಲದವರಾಗಿದ್ದು, ವಸಂತಿ ಪಡುಕೊಟ್ಟೈ ಮೂದವರಾಗಿದ್ದಾರೆ. ಕೇವಲ ಇವರಿಬ್ಬರರಷ್ಟೆ ಅಲ್ಲದೆ ಇನ್ನೂ ಐದು ಜನ ಪುರುಷರನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಐವರು ಪುರುಷರು, 46 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಮದ್ಯ ಮತ್ತು ಸಿಗರೇಟ್​ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಚೆನ್ನೈ ಮೂಲದವರಾಗಿದ್ದು, ಇನ್ನಿಬ್ಬರು ಪಟ್ಟಿನಮ್​, ಮತ್ತೋರ್ವ ಇಲ್ಲಯಗುಂಡಿ ಮೂಲದವನು ಎನ್ನಲಾಗಿದೆ. (ಏಜೆನ್ಸೀಸ್​)

    3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ

    ‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್​ ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts