More

    ಈ ಭೂಪ ಮನಿ ಹೈಸ್ಟ್​ ವೆಬ್​ ಸೀರೀಸ್​ ಮಾದರಿಯಲ್ಲಿ ಚಿನ್ನದ ಸಾಗಾಟ ಮಾಡಿದ..!

    ಗುವಾಹಟಿ: ಚಿನ್ನ ಕಳ್ಳಸಾಗಣೆ ಮಾಡೋದು ಅಂದ್ರೆ ಆಟನಾ? ಇಲ್ಲೊಬ್ಬ ಭೂಪ ಥೇಟ್​ ಸಿನಿಮೀಯ ಶೈಲಿಯಲ್ಲೇ ಚಿನ್ನವನ್ನು ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾನೆ.

    ಮನಿ ಹೈಸ್ಟ್​ ಎಂಬ ವೆಬ್​ ಸಿರೀಸ್​​ನಲ್ಲಿ ಕಳ್ಳರ ಗುಂಪೊಂದು ಬ್ಯಾಂಕ್​ನಲ್ಲಿದ್ದ ಚಿನ್ನದ ಗಟ್ಟಿಗಳನ್ನು ಕರಗಿಸಿ ಮಾತ್ರೆಯಷ್ಟು ಸಣ್ಣ ಗಾತ್ರಕ್ಕೆ ಕುಗ್ಗಿಸಿ ಕದಿಯುತ್ತಾರೆ. ಅದೇ ಮಾದರಿಯಲ್ಲಿ ಗುವಾಹಟಿಯಲ್ಲಿ ಮೊಹಮ್ಮದ್​ ಶಫಿ ಎನ್ನುವಾತ ಚಿನ್ನವನ್ನು ಸಣ್ಣ ತುಂಡುಗಳಾಗಿ ಪರಿವರ್ತಿಸಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದಾನೆ.

    ರೈಲ್ವೇ ಪೊಲೀಸರು ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಸಾಗಣೆಯಾಗುತ್ತಿದ್ದ ಸರಕನ್ನು ಗುವಾಹಟಿಯಲ್ಲಿ ವಶಪಡಿಸಿಕೊ0ಡಿದ್ದಾರೆ. ಸರಕಿಗೆ ಸಂಬಂಧಿಸಿದಂತೆ ಮೊಹಮ್ಮದ್​ ಶಫಿ ಎನ್ನುವಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಕ್ಕರುವ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ 50 ಲಕ್ಷ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts