ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

Vijayavani Abhiyana
Published on

ಕನ್ನಡದಲ್ಲಿ ಆಂಗ್ಲ ಪದಗಳು ಎಷ್ಟೊಂದು ಹಾಸುಹೊಕ್ಕಾಗಿವೆ ಎಂದರೆ ನಮ್ಮ ಮಾತುಗಳಲ್ಲಿ ಅವು ನಮಗೆ ಗೊತ್ತಿಲ್ಲದಂತೆ ನುಸುಳಿಬಿಟ್ಟಿರುತ್ತವೆ. ಬರಹದಲ್ಲೂ ಹಾಗೆಯೇ. ಸುದ್ದಿಯಲ್ಲೂ ಆಂಗ್ಲ ಪದಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತವೆ. ಇದಕ್ಕೆ ನಮ್ಮ ವಿಜಯವಾಣಿ ಡಾಟ್ ನೆಟ್ (Vijayavani.net) ಸುದ್ದಿತಾಣ ಕೂಡ ಹೊರತಲ್ಲ.

ಸಾಧ್ಯವಾದಷ್ಟೂ ಕನ್ನಡ ಪದಗಳನ್ನೇ ಬಳಸಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ನಮ್ಮ ನಲ್ಮೆಯ ಓದುಗರಿಗೆ ಒಂದು ಕೆಲಸ ಕೊಡುತ್ತಿದ್ದೇವೆ. ನಮ್ಮ ಸುದ್ದಿತಾಣದಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ನಿಮಗೆ ಆಂಗ್ಲ ಪದ ಕಾಣಿಸಿದರೆ ನೀವು ಅದನ್ನು ಗುರುತು ಮಾಡಿ ನಮಗೆ ಕಳುಹಿಸಿಕೊಡಿ. ಕನ್ನಡದ ಈ ಕೆಲಸದಲ್ಲಿ ತೊಡಗಿಸಿಕೊಂಡು ಅತ್ಯಧಿಕ ಆಂಗ್ಲ ಪದಗಳನ್ನು ಹುಡುಕಿ ಕಳಿಸಿದ ಅಗ್ರ ಹತ್ತು ಮಂದಿ ಕನ್ನಡಾಭಿಮಾನಿಗಳಿಗೆ ನಮ್ಮ ಕಡೆಯಿಂದ ಬಹುಮಾನ ದೊರೆಯಲಿದೆ. ನೀವು ಹುಡುಕಿದ ಆಂಗ್ಲಪದಗಳಿಗೆ ಸಂಬಂಧಿಸಿದ ಸುದ್ದಿಯ ಲಿಂಕ್ ಕೂಡ ಆ ಪದಗಳೊಂದಿಗೆ ನಮಗೆ ಕಳಿಸಿಕೊಡಬೇಕು‌.

ಈ ಅಭಿಯಾನ ನವೆಂಬರ್ ತಿಂಗಳುದ್ದಕ್ಕೂ ನಡೆಯುತ್ತದೆ. ಆಸಕ್ತರು ಹೀಗೆ ಒಂದು ದಿನದಲ್ಲಿ ಎಷ್ಟು ಸಲ ಬೇಕಾದರೂ ಆಂಗ್ಲ ಪದ ಹುಡುಕಿ ಕಳಿಸಬಹುದು. ಅಭಿಯಾನದುದ್ದಕ್ಕೂ ಎಷ್ಟು ದಿನ ಬೇಕಾದರೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು, ಇದಕ್ಕೆ ಮಿತಿ ಇಲ್ಲ. ಕೊನೆಯಲ್ಲಿ ಅತಿ ಹೆಚ್ಚು ಆಂಗ್ಲ ಪದ ಹುಡುಕಿ ಕಳಿಸಿದ ಬಹುಮಾನ ವಿಜೇತರನ್ನು ಘೊಷಿಸಲಾಗುತ್ತದೆ. ನಾಡಿನ ಗಣ್ಯಮಾನ್ಯರೊಬ್ಬರು ವಿಜೇತರನ್ನು ಗೌರವಿಸಲಿದ್ದಾರೆ.

ಬನ್ನಿ ನಮ್ಮ ಈ ಅಭಿಯಾನದಲ್ಲಿ ಭಾಗವಹಿಸಿ. ನಮ್ಮ ಸುದ್ದಿ ತಾಣದ ವಿಳಾಸ - vijayavani.net ಮತ್ತು ಆಂಗ್ಲ ಪದ ಹುಡುಕಿ ಕಳಿಸಬೇಕಾದ Whatsapp ಸಂಖ್ಯೆ - 88844 31903.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net