More

    47 ಲಕ್ಷ ರೂ. ಕೊಟ್ಟರೆ ಜೀವಂತ ಸಮಾಧಿ ಮಾಡ್ತಾರಂತೆ​! ಈ ಆಫರ್ ಹಿಂದಿನ ಕಾರಣ ಕೇಳಿದ್ರೆ ನೀವು ಬೆರಗಾಗ್ತೀರಾ​

    ಮಾಸ್ಕೋ: ಸಾವು ಎಂದರೆ ಯಾರಿಗೆ ತಾನೇ ಭಯ ಪಡುವುದಿಲ್ಲ. ಸಾವು ಹತ್ತಿರ ಬರುತ್ತಿದೆ ಅಂತಾ ಗೊತ್ತಾದರೆ ಸಾಕು ಮುಕ್ಕೋಟಿ ದೇವರಗಳನ್ನು ಬೇಡಿಕೊಳ್ಳುತ್ತೇವೆ. ಹೀಗಿರುವಾಗ ಜೀವಂತ ಸಮಾಧಿಯಾಗಲು ಯಾರಾದರೂ ಒಪ್ಪುತ್ತಾರಾ? ಖಂಡಿತ ಇಲ್ಲ. ಆದರೆ, ರಷ್ಯಾದ ಈ ಒಂದು ಕಂಪನಿ 47 ಲಕ್ಷ ರೂಪಾಯಿ ಕೊಟ್ಟರೆ ಜೀವಂತ ಸಮಾಧಿ ಮಾಡುತ್ತದೆಯಂತೆ. ಇದೇನಪ್ಪಾ ವಿಚಿತ್ರಾ ಅಂತಾ ಹುಬ್ಬೇರಿಸುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಇನ್ನುಷ್ಟು ಅಚ್ಚರಿಯು ಇದರಲ್ಲಿದೆ.

    ಅಂದಹಾಗೆ ಆ ರಷ್ಯಾ ಕಂಪನಿಯ ಹೆಸರು ಪ್ರೆಕಾಟೆಡ್​ ಅಕಾಡೆಮಿ ಎಂದು. ತನ್ನ ಗ್ರಾಹಕರಿಗೆ ಜೀವಂತ ಸಮಾಧಿಯಾಗುವ ಆಫರ್​ ನೀಡಿದೆ. ಬದುಕಿರುವಾಗಲೇ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅದನ್ನು ಕಣ್ತುಂಬಿಕೊಳ್ಳಬಹುದಂತೆ. ಇದಕ್ಕಾಗಿ ಗ್ರಾಹಕರು 3.5 ಮಿಲಿಯನ್​ ರೂಬಲ್ಸ್ (ರಷ್ಯಾ ಕರೆನ್ಸಿ)​ ಪಾವತಿಸಬೇಕಂತೆ. ಭಾರತೀಯ ಕರೆನ್ಸಿ ಪ್ರಕಾರ 47 ಲಕ್ಷ ರೂಪಾಯಿ ಕೊಡಬೇಕಂತೆ. ಕಾಸು ಕೊಟ್ಟು ನಮ್ಮ ಅಂತ್ಯಕ್ರಿಯೆ ನಾವೇ ನೋಡಬೇಕಾ? ಇದೆಂಥಾ ಕರ್ಮನಪ್ಪಾ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಅಂಥವರು ಕೂಡ ನಮ್ಮ ನಡುವೆ ಇದ್ದಾರೆ ಅಂದರೆ ನೀವು ನಂಬಲೇಬೇಕು.

    ಈ ಕಂಪನಿಯ ಸಂಸ್ಥಾಪಕಿಯ ಹೆಸರು ಯಾಕಟೆರಿನಾ ಪ್ರೀಬ್ರಾಜೆನ್ಸ್ಕಾಯಾ. ಈ ವಾರದ ಆರಂಭದಲ್ಲೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೊಸ ಉದ್ಯಮವನ್ನು ಯಾಕಟೆರಿನಾ ಘೋಷಣೆ ಮಾಡಿದ್ದಾರೆ. ಅಯ್ಯೋ ಯಾರಾದರೂ ಇದನ್ನು ಬಯಸುತ್ತಾರಾ ಎಂದು ನೀವು ಆಶ್ಚರ್ಯ ಪಡಬಹುದು. ಆದರೆ, ಯಾಕಟೆರಿನಾ ಅವರು ಹೇಳುವ ಪ್ರಕಾರ ಈ ಅನುಭವವು ತನ್ನ ಗ್ರಾಹಕರಿಗೆ ಹೊಸ ಪ್ರತಿಭೆಗಳು ಮತ್ತು ಅತೀಂದ್ರಿಯ ಸಾಮರ್ಥ್ಯಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆಯಂತೆ. ಅಲ್ಲದೆ, ಭಯ ಮತ್ತು ಆತಂಕವನ್ನು ಎದುರಿಸಲು ನೆರವಾಗುತ್ತದೆಯಂತೆ. ಈ ವಿಚಿತ್ರ ಅನುಭವವನ್ನು ನಿಮಗಾಗಿ ಮತ್ತು ನಿಮ್ಮ ಸ್ವಂತ ಸಂತೋಷದ ಭವಿಷ್ಯಕ್ಕಾಗಿ ಹೋರಾಡುವ ನಿಜವಾದ ಸಂಕೇತ ಎಂದು ಇನ್​ಸ್ಟಾಗ್ರಾಂನಲ್ಲಿ ಯಾಕಟೆರಿನಾ ಬಣ್ಣಿಸಿದ್ದಾರೆ.

    ಅಂದಹಾಗೆ ಇದನ್ನು ಮಾನಸಿಕ ಚಿಕಿತ್ಸೆ (ಸೈಕಿಕ್​ ಥೆರಪಿ) ಎಂದು ಕಂಪನಿ ಕರೆದಿದೆ. ಭಯ ಮತ್ತು ಆತಂಕದಿಂದ ಹೊರಬರಲು ಇದು ಸಹಕಾರಿಯಾಗಿದೆ ಎಂದು ಯಾಕಟೆರಿನಾ ಹೇಳಿದ್ದಾರೆ. ಈ ಅನುಭವ ಪಡೆಯಲು 47 ಲಕ್ಷ ರೂ. ಚಾರ್ಜ್​ ಮಾಡುತ್ತಾರಂತೆ. ಹಣ ಪಾವತಿಸಿ, ಆಫರ್​ ಸ್ವೀಕಾರ ಮಾಡಿದರೆ, ಗ್ರಾಹಕನನ್ನು ಒಂದು ಗಂಟೆಗಳ ಕಾಲ ಶವದ ಪೆಟ್ಟಿಗೆಯಲ್ಲಿ ಇಟ್ಟು ಜೀವಂತ ಸಮಾಧಿ ಮಾಡುತ್ತಾರೆ. ಅಲ್ಲದೆ, ಎಲ್ಲ ರೀತಿಯ ವಿಧಿ ವಿಧಾನಗಳನ್ನು ಸಹ ಆಚರಿಸುತ್ತಾರೆ. ಇಡೀ ಆಚರಣೆ ರಷ್ಯಾದ ಸೆಂಟ್​ ಪೀಟರ್​ಬರ್ಗ್​ನಲ್ಲಿ ನಡೆಯುತ್ತದೆ.

    ರಷ್ಯಾಕ್ಕೆ ಪ್ರಯಾಣಿಸಲು ಸಾಧ್ಯವಾಗದವರಿಗೆ ಅಥವಾ ಈ ಪ್ಯಾಕೇಜ್​ ತುಂಬಾ ದುಬಾರಿಯಾಗಿದೆ ಎಂದು ಭಾವಿಸುವವರಿಗೆ, ಕಂಪನಿಯು ಅಗ್ಗದ ಆನ್‌ಲೈನ್ ಪ್ಯಾಕೇಜ್ ಸಹ ನೀಡಿದೆ. ಆನ್‌ಲೈನ್ ಪ್ಯಾಕೇಜ್‌ನ ಬೆಲೆ 12 ಲಕ್ಷ ರೂಪಾಯಿ. ಈ ಪ್ಯಾಕೇಜ್​ ಅಡಿಯಲ್ಲಿ ಒಬ್ಬ ವ್ಯಕ್ತಿಯು ಮೇಣದಬತ್ತಿಗಳು ಮತ್ತು ಅಂತ್ಯಕ್ರಿಯೆಯ ಹಾಡುಗಳೊಂದಿಗೆ ತಮ್ಮ ಸ್ವಂತ ಅಂತ್ಯಕ್ರಿಯೆಯನ್ನು ಅನುಭವವನ್ನು ಆನ್‌ಲೈನ್‌ ಮೂಲಕ ಪಡೆಯಬಹುದಂತೆ.

    ಆದರೆ, ಭಯ ಮತ್ತು ಆತಂಕವನ್ನು ಸಂಪೂರ್ಣ ತೊಡೆದುಹಾಕಲು ಮತ್ತು ಜೀವನವನ್ನು ಉತ್ಸಾಹದಿಂದ ನಡೆಸಲು ಹಾಗೂ ಹೊಸ ಇಚ್ಛೆಯನ್ನು ಕಂಡುಕೊಳ್ಳಲು ಬಯಸುವವರು ಉತ್ತಮ ಫಲಿತಾಂಶಗಳಿಗಾಗಿ “ಪೂರ್ಣ ಪ್ರಮಾಣದ ಸಮಾಧಿ” ವಿಧಾನವನ್ನು ಪ್ರಿಕೇಟೆಡ್ ಅಕಾಡೆಮಿ ಶಿಫಾರಸು ಮಾಡುತ್ತದೆ. ಸಮಾಧಿ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕಂಪನಿಯ ಸಂಸ್ಥಾಪಕಿ ಯಕಟೆರಿನಾ ಪ್ರೀಬ್ರಾಜೆನ್ಸ್ಕಾಯಾ ಭರವಸೆ ನೀಡಿದ್ದು, ತಮ್ಮ ಗ್ರಾಹಕರ ಸುರಕ್ಷತೆಯೇ ಸಂಸ್ಥೆಗೆ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

    ಇಷ್ಟು ಓದಿದ ಮೇಲೆ ನಿಮಗೆ ಒಮ್ಮೆ ಟ್ರೈ ಮಾಡಬೇಕು ಅನಿಸಿದರೆ, ಮಾಡಿ. ಈ ಸ್ಟೋರಿ ಓದಿ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸುವುದನ್ನು ಮರೆಯಬೇಡಿ. (ಏಜೆನ್ಸೀಸ್​)

    ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

    ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: 16ರ ಬಾಲಕ ಬಂಧನ, ಭಾವುಕರಾಗಿ ಮನವಿ ಒಂದನ್ನು ಮಾಡಿದ ಕಲಬುರಗಿ ಎಸ್ಪಿ

    ಹನಿಟ್ರ್ಯಾಪ್​ಗೆ ಬೀಳಿಸಲು ಯತ್ನ: ಅಪರಿಚಿತ ಯುವತಿ ವಿರುದ್ಧ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿಯಿಂದ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts