More

    ಮಹಿಳೆಯರಲ್ಲಿ ಭಯದ ವಾತಾವರಣ

    ಯಲಬುರ್ಗಾ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಹಿಂದುಪರ ಸಂಘಟನೆಗಳು ಶನಿವಾರ ರಾತ್ರಿ ಮೌನ ಪ್ರತಿಭಟನೆ ನಡೆಸಿದವು.

    ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಪರ ವಾತಾವರಣ ಹೇಗಿದೆ ಎಂದು ನೀವೇ ಹೇಳಿ, ನಾನು ಪೊಲಿಟಿಕಲ್ ಅನಾಲಿಸ್ಟ್ ಅಲ್ಲ : ಸುಮಲತಾ ಅಂಬರೀಶ್

    ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಕೊಲೆ, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಅಂತಹ ವಿಕೃತ ಮನಸ್ಸಿನ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಘಟನೆಯಿಂದ ವಿದ್ಯಾರ್ಥಿ ಹಾಗೂ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಹಾಡಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿರುವುದು ಖೇದಕರ ಸಂಗತಿ. ಕೂಡಲೇ ರಾಜ್ಯದ ಮುಖಮಂತ್ರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಿ. ಇಂಥ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು.

    ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಗೌರಾ ಬಸವರಾಜ, ಸಿ.ಎಚ್.ಪಾಟೀಲ್, ಅಮರೇಶ ಹುಬ್ಬಳ್ಳಿ, ಶಿವಲೀಲಾ ದಳವಾಯಿ, ಶಕುಂತಲಮ್ಮ ಮಾಲಿಪಾಟೀಲ್,

    ವೀರಣ್ಣ ಹುಬ್ಬಳ್ಳಿ, ವಸಂತ ಭಾವಿಮನಿ, ಕುಮಾರಗೌಡ ಪಾಟೀಲ್, ಕಲ್ಲಪ್ಪ ಕರಮುಡಿ, ಎಸ್.ಎನ್.ಶ್ಯಾಗೋಟಿ, ಪ್ರಕಾಶ ಬೇಲೇರಿ, ಎ.ಎಂ.ಶಂಕರಗೌಡ, ಶರಣಪ್ಪ ರಾಂಪುರ, ಸಿದ್ರಾಮೇಶ ಬೇಲೇರಿ, ಕಳಕಪ್ಪ ತಳವಾರ್, ಬಸನಗೌಡ ತೊಂಡಿಹಾಳ, ಈರಪ್ಪ ಬಣಕಾರ, ಸ.ಶರಣಪ್ಪ ಪಾಟೀಲ್, ಗೌತಮ ಜೋಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts