More

    ಮಂಡ್ಯದಲ್ಲಿ ಕುಮಾರಸ್ವಾಮಿ ಪರ ವಾತಾವರಣ ಹೇಗಿದೆ ಎಂದು ನೀವೇ ಹೇಳಿ, ನಾನು ಪೊಲಿಟಿಕಲ್ ಅನಾಲಿಸ್ಟ್ ಅಲ್ಲ : ಸುಮಲತಾ ಅಂಬರೀಶ್

    ಮೈಸೂರು: ‘ನಾನು ಪೊಲಿಟಿಕಲ್ ಅನಾಲಿಸ್ಟ್ ಅಲ್ಲ, ಕೇವಲ ಸಂಸದೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರವಾದ ವಾತಾವರಣ ಹೇಗಿದೆ ಎಂಬುದನ್ನು ನೀವೇ ಹೇಳಬೇಕು ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

    ಮಂಡ್ಯದಲ್ಲಿ ನಾನು ತಟಸ್ಥವಾಗಿಲ್ಲ, ನಮ್ಮ ಅಭಿಮಾನಿಗಳು ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನಾನೇ ಕಾರಲ್ಲಿ ಹೋಗಿ ಮೈಕ್ ಹಿಡಿದು ಪ್ರಚಾರ ಮಾಡುವುದಿಲ್ಲ. ನಾನು ಪ್ರಚಾರ ಮಾಡುವ ವಿಚಾರದಲ್ಲಿ ಎನ್‌ಡಿಎ ಹಾಗೂ ಬಿಜೆಪಿ ತೀರ್ಮಾನ ಮಾಡಬೇಕು. ಅವರು ಆಹ್ವಾನ ನೀಡಿದರೆ ನಾನು ಪ್ರಚಾರ ನಡೆಸುತ್ತೇನೆ. ನಾನು ಸೀಟು ಬಿಟ್ಟುಕೊಟ್ಟು ಬಿಜೆಪಿ ಸೇರಿದ್ದೇನೆ ಎಂದರೆ ನನ್ನ ಬೆಂಬಲ ಎನ್‌ಡಿಎಗೆ ಇದೆ ಎಂದೇ ಅರ್ಥ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನಾನು ಕಾಂಟ್ರವರ್ಸಿ ಮಾಡಲು ಇಲ್ಲಿಗೆ ಬಂದಿಲ್ಲ. ‘ಕುಮಾರಸ್ವಾಮಿ- ಸುಮಲತಾ ಕಾಂಟ್ರವರ್ಸಿ’ ಮಾಡಲೇಬೇಕೆಂದರೆ ನಾನು ಮಾತನಾಡುವುದಿಲ್ಲ. ಬಿಜೆಪಿ ಪಕ್ಷ ತೀರ್ಮಾಸಿದಂತೆ ನಾನು ಕೆಲಸ ಮಾಡುತ್ತೇನೆ. ನನ್ನನ್ನು ಪಕ್ಷ ಮಂಡ್ಯದಿಂದ ಹೊರಗೆ ಇಟ್ಟಿಲ್ಲ, ಆ ರೀತಿ ಇದ್ದಿದ್ದರೆ ನಾನು ಏತಕ್ಕೆ ಬಿಜೆಪಿ ಸೇರಬೇಕಿತ್ತು? ನಾನು ಎನ್‌ಡಿಎಗೆ ಬೆಂಬಲ ನೀಡುವ ಅವಶ್ಯಕತೆ ಏನಿತ್ತು ಎಂದು ಮಾಧ್ಯಮದವರ ಪ್ರಶ್ನೆಗೆ ಅಸಮಾಧಾನಗೊಂಡು ಹರಿಹಾಯ್ದರು.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಏತಕ್ಕೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಸ್ವತಃ ದರ್ಶನ್ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಯಾವುದೇ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಅವರಿಗೆ ಯಾರು ಇಷ್ಟವೋ ಅವರ ಪರವಾಗಿ ಪ್ರಚಾರ ಮಾಡುತ್ತಾರೆ. ದರ್ಶನ್ ಸಣ್ಣ ಮಗುವಲ್ಲ, ಅವರಿಗೆ ಯಾರಾದರೂ ಸಹಾಯ ಮಾಡಿದರೆ ಅವರು ಪ್ರತಿಯಾಗಿ ಸಹಾಯ ಮಾಡುತ್ತಾರೆ. ದರ್ಶನ್ ಸ್ವತಂತ್ರ ವ್ಯಕ್ತಿ. ಅವರು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದರು.

    ನೇಹಾ ಹತ್ಯೆಯ ಬಳಿಕ ಒಂದಷ್ಟು ವಿಡಿಯೋ ವೈರಲ್ ಆಗುತ್ತಿದೆ, ಇದು ತುಂಬಾ ನೋವಿನ ವಿಚಾರ. ಸಾವಿನ ಬಳಿಕ ಯುವತಿಯ ವ್ಯಕ್ತಿತ್ವದ ಕುರಿತು ಮಾತನಾಡಿ ಮತ್ತಷ್ಟು ಸಾಯಿಸುತ್ತಿದ್ದಾರೆ. ವೈಯಕ್ತಿಕ ಕಾರಣಕ್ಕೆ ನೇಹಾ ಹತ್ಯೆ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ವೈಯಕ್ತಿಕ ಕಾರಣ ಎಂದರೆ ಏನು? ವೈಯಕ್ತಿಕ ದ್ವೇಷಕ್ಕೆ ಕೊಲ್ಲಬಹುದಾ? ಆ ರೀತಿ ಮಾಡುವುದು ಸರೀನಾ? ಒಂದು ಸಮುದಾಯವನ್ನು ಮೆಚ್ಚಿಸುವ ಕೆಲಸ ಸರಿಯಲ್ಲ. ಏನೇ ಮಾಡಿದರು ಕೂಡ ಸಮರ್ಥಿಸುವುದು ಅಕ್ಷಮ್ಯ ಅಪರಾಧ. ಎಲ್ಲರೂ ಕೂಡ ಇದನ್ನು ಖಂಡಿಸಬೇಕು. ಒಂದು ಸಮುದಾಯವನ್ನು ಮೆಚ್ಚಿಸಲು ಹೇಳಿಕೆ ನೀಡಬಾರದು. ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗ ಕಾಂಗ್ರೆಸ್ ನಾಯಕರು ಮೌನವಾಗಿದ್ದರು. ಇಂತಹ ವಿಚಾರದಲ್ಲೂ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts