More

    ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: 16ರ ಬಾಲಕ ಬಂಧನ, ಭಾವುಕರಾಗಿ ಮನವಿ ಒಂದನ್ನು ಮಾಡಿದ ಕಲಬುರಗಿ ಎಸ್ಪಿ

    ಕಲಬುರಗಿ: ಆಳಂದ ತಾಲೂಕಿನ ಕಬ್ಬಿನ ಗದ್ದೆಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ 16 ವರ್ಷದ ಬಾಲಕ ಎಂಬುದೇ ಆತಂಕಕಾರಿ ಸಂಗತಿಯಾಗಿದೆ. ಈ ವಯಸ್ಸಿಗೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಹೊತ್ತಿರುವುದು ನಿಜಕ್ಕೂ ಆಘಾತವಾಗುವಂಥದ್ದು. ಮೃತ ಬಾಲಕಿ ಬಯಲು ಶೌಚಕ್ಕೆ ಹೋಗುವಾಗ ಆಕೆಯನ್ನು ಬಾಲಕ ಹಿಂಬಾಲಿಸಿಕೊಂಡು ಹೋಗಿದ್ದ. ಸುತ್ತಮುತ್ತ ಯಾರು ಇಲ್ಲದೆ ಇರೋದನ್ನು ಗಮನಿಸಿ ಆಕೆಯನ್ನು ಹಿಂಬಾಲಿಸಿದ್ದ. ಈ ವೇಳೆ ಆತನನ್ನು ಕಂಡು ಬಾಲಕಿ ಹೆದರಿ ಅಲ್ಲಿಂದ ಓಡಿ ಹೋಗುವುದಕ್ಕೆ ಮುಂದಾಗಿದ್ದಳು.

    ಓಡಿ ಹೋಗುತ್ತಿದ್ದ ಬಾಲಕಿಯನ್ನು ಬೆನ್ನಟ್ಟಿ ಹಿಂದೆಯಿಂದ ತಬ್ಬಿಕೊಂಡು ಬಲವಂತವಾಗಿ ಕಬ್ಬಿನ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ರೇಪ್ ಮಾಡಿದ ಬಳಿಕ ಬಾಲಕಿ ವಿಚಾರ ಗ್ರಾಮದವರ ಮುಂದೆ ಬಾಯಿ ಬಿಟ್ಟು ಬಿಡುತ್ತಾಳೆ ಅಂತಾ ಹೆದರಿ, ಅತ್ಯಾಚಾರದ ಬಳಿಕ ವೇಲ್​ನಿಂದ ಕುತ್ತಿಗೆ ಬಿಗಿದು, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಕಬ್ಬಿನ ಹೊಲದಲ್ಲಿ ಕೊಲೆ ಮಾಡಿ ಬಳಿಕ ಹೊಲದ ಹಿಂದೆ ನಾಲೆಯಲ್ಲಿ ರಕ್ತದ ಕಲೆ ತೊಳೆದುಕೊಂಡು ಮನೆಗೆ ತೆರಳಿದ್ದ. ಆರೋಪಿ ಬಾಲಕ ಗ್ರಾಮದಲ್ಲಿ ಒಬ್ಬನೆ ಇರ್ತಿದ್ದನಂತೆ. ಯಾರ ಜೊತೆಯೂ ಸೇರುತ್ತಿರಲಿಲ್ಲವಂತೆ. ಯಾವಾಗಲೂ ಮೊಬೈಲ್​ನಲ್ಲಿ ಇರುತ್ತಿದ್ದ ಆತ ಹೆಚ್ಚಾಗಿ ಅಶ್ಲೀಲ ವಿಡಿಯೋ ನೋಡುತ್ತಿದ್ದನಂತೆ. ಅದರಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರದ ವಿಡಿಯೋ ನೋಡುತ್ತಿದ್ದ ಎಂದು ಹೇಳಲಾಗಿದೆ.

    ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದರು. ಅಂತಿಮವಾಗಿ ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಡಿಜಿ ಐಜಿಪಿಯಿಂದ ಒಂದು ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ಪ್ರಕರದ ಚಾರ್ಜ್ ಶೀಟ್ ಅನ್ನು ಹತ್ತು ದಿನದ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಲಬುರಗಿ ಎಸ್ಪಿ ಇಶಾಪಂತ್ ಹೇಳಿಕೆ ನೀಡಿದ್ದಾರೆ.

    ಮಕ್ಕಳ ಕೈಗೆ ಮೊಬೈಲ್ ಕೋಡುವ ಪೋಷಕರೆ ಎಚ್ಚರ!
    ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರು ತುಂಬಾ ಎಚ್ಚರ ವಹಿಸಬೇಕು. ಮಕ್ಕಳ ಮೇಲೆ ತುಂಬಾ ನಿಗಾ ಇಟ್ಟಿರಬೇಕು. ಮೊಬೈಲ್​ನಲ್ಲಿ ಯಾವ ಅಂಶದ ಮೇಲೆ ಅವರ ಗಮನ ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಕೆಟ್ಟದ್ದನ್ನು ಮಾಡಿದಾಗ ತಿಳಿಹೇಳಬೇಕು. ಇಲ್ಲವಾದಲ್ಲಿ ದಾರಿ ತಪ್ಪುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಕಹಿ ಉದಾಹರಣೆಯೇ ಕಲಬುರಗಿ ಘಟನೆ. ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಬಾಲಕನೊಬ್ಬ ಇದೀಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಬಂಧನಕ್ಕೆ ಒಳಗಾಗಿದ್ದಾರೆ. ಅತ್ಯಾಚಾರ ಕೊಲೆ ಪ್ರಕರಣ ಬೇಧಿಸಿದ ಬಳಿಕ ಕಲಬುರಗಿ ಎಸ್​ಪಿ ಇಶಾಪಂತ್ ಭಾವುಕರಾಗಿದ್ದರು. ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣದಿಂದ ಕಣ್ಣಿರು ಹಾಕಿದರು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವ ಹಾಗೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ ವಹಿಸುವಂತೆ ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)

    ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

    ದೇವತಾ ವಿಗ್ರಹಗಳು; ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ..

    ಕಡತ ವಿಲೇವಾರಿಗೆ ಹಿಡಿದ ಗ್ರಹಣ: ಹಂತ ಕಡಿತಕ್ಕೆ ಮೀನಮೇಷ, ಸುತ್ತಾಟ ಯಥಾಸ್ಥಿತಿ; ಯೋಜನೆಗಳ ಅನುಷ್ಠಾನಕ್ಕೆ ತೊಡಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts