ಹನಿಟ್ರ್ಯಾಪ್​ಗೆ ಬೀಳಿಸಲು ಯತ್ನ: ಅಪರಿಚಿತ ಯುವತಿ ವಿರುದ್ಧ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿಯಿಂದ ದೂರು

GH Tipparedy
Published on

ಚಿತ್ರದುರ್ಗ: ಇಲ್ಲಿನ ಬಿಜೆಪಿ ಶಾಸಕ ಜಿ.ಎಚ್​. ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಯತ್ನ ನಡೆದಿದ್ದು, ಸ್ವತಃ ಶಾಸಕರೇ ಚಿತ್ರದುರ್ಗದ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಬೆತ್ತಲೆಯಾಗಿದ್ದ ಯುವತಿಯೊಬ್ಬಳು ವಿಡಿಯೋ ಕಾಲ್​ ಮಾಡುವ ಮೂಲಕ ಶಾಸಕರನ್ನು ಹನಿಟ್ರ್ಯಾಪ್​ ಬಲೆಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾಳೆ. ಅಪರಿಚಿತ ಯುವತಿ ಒಟ್ಟು ಮೂರು ಬಾರಿ ವಿಡಿಯೋ ಕಾಲ್ ಮಾಡಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ವಿಡಿಯೋ ಕರೆ ನೋಡಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟಿದ್ದಾಗಿ ತಿಪ್ಪಾರೆಡ್ಡಿ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕರೆ ಬಂದಿದ್ದ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿಸಿದ್ದೇನೆ. ಕರೆ ಕಡಿತಗೊಳಿಸಿದ ಬಳಿಕವೂ ಅಶ್ಲೀಲ ವಿಡಿಯೋಗಳನ್ನು ವಾಟ್ಸ್​ಆ್ಯಪ್​ ಮಾಡಿದ್ದರು ಎಂದು ಶಾಸಕರು ಹೇಳಿದ್ದಾರೆ.

ಶಾಸಕರ ದೂರು ಆಧರಿಸಿ CEN ಪೊಲೀಸ್ ಠಾಣೆಯಲ್ಲಿ‌ ಎಫ್​ಐಆರ್​ ದಾಖಲಾಗಿದೆ. ಐಟಿ ಆಕ್ಟ್ 66 (A) ಅಡಿಯಲ್ಲಿ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜಸ್ಥಾನ, ಒರಿಸ್ಸಾ ಭಾಗದಿಂದ ವಿಡಿಯೋ ಕಾಲ್ ಬಂದಿದೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net