More

    ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸಿಕ್ಕ ಪ್ರಕೃತಿ ವಿಕೋಪ ಪರಿಹಾರ ಎಷ್ಟು ಗೊತ್ತಾ?

    ನವದೆಹಲಿ: ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಪ್ರಕೃತಿ ವಿಕೋಪ ಪರಿಹಾರ ಧನ ಬಿಡುಗಡೆ ಮಾಡಲು ನಿರ್ಧರಿಸಿದೆ.

    ಈ ವರ್ಷ ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಪ್ರವಾಹ ಮತ್ತು ಭೂಕುಸಿತಗಳಿಂದ ನಲುಗಿದ್ದ ರಾಜ್ಯಗಳಿಗೆ ಇವುಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಅನುಮೋದನೆ ನೀಡಿದೆ. ಕರ್ನಾಟಕ ಹೊರತುಪಡಿಸಿದರೆ, ಈ ಬಾರಿ ಅತಿ ಹೆಚ್ಚು ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳಿಗೆ ಈ ಪರಿಹಾರದ ಮೊತ್ತ ಘೋಷಣೆಯಾಗಿದೆ.

    ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ 4,382 ಕೋಟಿ ರೂ.ಗಳ ಹೆಚ್ಚುವರಿ ನೆರವು ನೀಡಲು ಕೇಂದ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಒಪ್ಪಿಗೆ ನೀಡಿದೆ.

    ಇದನ್ನೂ ಓದಿ: ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್​ನಲ್ಲಿ ದೀದಿ!

    ಯಾವ ರಾಜ್ಯಕ್ಕೆ ಎಷ್ಟೆಷ್ಟು?
    ಕರ್ನಾಟಕದ ವಿಷಯ ಹೇಳುವುದಾದರೆ ಈ ಸಲ ರಾಜ್ಯ ಭಯಾನಕ ಪ್ರಕೃತಿ ವಿಕೋಪಗಳನ್ನು ಕಂಡಿದೆ. ನೈರುತ್ಯ ಮುಂಗಾರು ಋತುವಿನಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಹಲವಾರು ಜಿಲ್ಲೆಗಳು ತತ್ತರಿಸಿ ಹೋಗಿವೆ. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕಕ್ಕೆ 577.84 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೇಂದ್ರ ನಿರ್ಧರಿಸಿದೆ.

    ಇನ್ನುಳಿದಂತೆ, ಅಂಫಾನ್ ಚಂಡಮಾರುತಕ್ಕಾಗಿ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ಹಾಗೂ ಒಡಿಶಾಗೆ 128.23 ಕೋಟಿ ರೂ, ಮಹಾರಾಷ್ಟ್ರಕ್ಕೆ 268.59 ಕೋಟಿ ರೂ, ಮಧ್ಯಪ್ರದೇಶಕ್ಕೆ 611.61 ಕೋಟಿ ರೂ. ಮತ್ತು ಈಶಾನ್ಯ ರಾಜ್ಯ ಸಿಕ್ಕಿಂಗೆ 87.84 ಕೋಟಿ ರೂಪಾಯಿ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ.

    ಇದಲ್ಲದೇ 2020-21ರ ಸಾಲಿನಲ್ಲಿ ಕೇಂದ್ರ ಸರ್ಕಾರವು ಎಸ್‍ಡಿಆರ್‍ಎಫ್ ನಿಧಿಯಿಂದ ದೇಶದ 28 ರಾಜ್ಯಗಳಿಗೆ 15,524.43 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

    ರಾಜೀವ್​ಗಾಂಧಿ ಆರೋಗ್ಯ ವಿವಿಯ ಕಾಲೇಜು ತೆರೆಯಲು ಡೇಟ್​ ಫಿಕ್ಸ್​

    ಸಿದ್ಧಗೊಂಡ ಒಬಾಮಾ ಆತ್ಮಚರಿತ್ರೆ- ರಾಹುಲ್​, ಸೋನಿಯಾ ಕುರಿತು ಏನಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts