More

    ಸಿದ್ಧಗೊಂಡ ಒಬಾಮಾ ಆತ್ಮಚರಿತ್ರೆ- ರಾಹುಲ್​, ಸೋನಿಯಾ ಕುರಿತು ಏನಿದೆ ಗೊತ್ತಾ?

    ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬರೆದಿರುವ ಪುಸ್ತಕವೊಂದು ಇದೀಗ ಭಾರಿ ಸುದ್ದಿಮಾಡುತ್ತಿದೆ. ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಪುಸ್ತಕ ಇದಾಗಿದೆ. 768 ಪುಟಗಳಿರುವ ಈ ಪುಸ್ತಕ ಇದೇ 17ರಂದು ಬಿಡುಗಡೆಗೊಳ್ಳಲಿದೆ. ಇದರಲ್ಲಿ ಅವರು ತಮ್ಮ ಬಾಲ್ಯಾವಸ್ಥೆಯಿಂದ ಹಿಡಿದು ರಾಜಕೀಯವಾಗಿ ಉತ್ತುಂಗಕ್ಕೇರಿದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

    ಈ ಪುಸ್ತಕ ಸುದ್ದಿ ಮಾಡಲು ಕಾರಣ, ಇದರಲ್ಲಿ ಅವರು ಅನೇಕ ರಾಜಕೀಯ ಮುಖಂಡರ ವಿಷಯಗಳನ್ನು ಪ್ರಸ್ತಾಪಿಸಿದ್ದು, ಅದರಲ್ಲಿ ಮುಖ್ಯವಾಗಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮನಮೋಹನ್​ಸಿಂಗ್​ ಅವರ ವಿಷಯಗಳೂ ಇವೆ. ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಹಲವಾರು ರಾಜಕೀಯ ಧುರೀಣರ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅವರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಾವು ಈ ಧುರೀಣರನ್ನು ಕಂಡ ರೀತಿಯ ಬಗ್ಗೆ ಅದರಲ್ಲಿ ವಿವರವಾಗಿ ತಿಳಿಸಲಾಗಿದೆ.

    ಒಬಾಮಾ 2009ರಿಂದ 2017ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೆ ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ಸಂಪರ್ಕದಲ್ಲಿ ಇದ್ದರು. ಆ ಸಂದರ್ಭದಲ್ಲಿ ಇವರೆಲ್ಲರೂ ವ್ಯವಹರಿಸಿದ ರೀತಿಯ ಕುರಿತು ತಮ್ಮ ಅನಿಸಿಕೆಗಳನ್ನ ನೇರವಾಗಿ ಒಬಾಮಾ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಶಾಂಘೈ ವೇದಿಕೆಯಲ್ಲಿ ಭಾರತ ಬೆಂಬಲಿಸಿದ ರಷ್ಯಾ: ಪಾಕ್, ಚೀನಾಕ್ಕೆ ಭಾರಿ ಮುಖಭಂಗ

    ಅಷ್ಟಕ್ಕೂ ರಾಹುಲ್​ ಗಾಂಧಿ ಬಗ್ಗೆ ಒಬಾಮಾ ಬರೆದಿರುವುದು ಏನೆಂದರೆ: ರಾಹುಲ್​ ಗಾಂಧಿಯವರು ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ. ಶಿಕ್ಷಕರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವ ಆದರೆ ಯಾವುದೇ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಮತ್ತು ಒಲವು ಹೊಂದಿಲ್ಲದ ವಿದ್ಯಾರ್ಥಿಯಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.

    ಪಠ್ಯವನ್ನು ಓದಿ ಮುಗಿಸಿ ಶಿಕ್ಷಕರಿಗೆ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ರಾಹುಲ್​ ಕಾಣುತ್ತಾರೆ. ಪಠ್ಯವಿಷಯಗಳನ್ನು ಸಂಪೂರ್ಣ ಕರಗತ ಮಾಡಿಕೊಳ್ಳುವ ಚಾತುರ್ಯತೆ ಅಥವಾ ಅಭಿಲಾಷೆ ಇಲ್ಲದ ವಿದ್ಯಾರ್ಥಿಯಾಗಿ ತೋರುವ ಅವರಲ್ಲಿ ಸದಾ ಒಂದು ರೀತಿಯ ತಳಮಳ, ಅಸ್ಪಷ್ಟ ಗುಣ ಇದೆ ಎಂದು ಪುಸ್ತಕದಲ್ಲಿ ಒಬಾಮಾ ವಿಶ್ಲೇಷಿಸಿದ್ದಾರೆ.

    ಇನ್ನು ಸೋನಿಯಾ ಗಾಂಧಿ ಅವರ ಬಗ್ಗೆ ಒಬಾಮಾ ಬರೆದಿರುವುದು ಏನೆಂದರೆ: “ಚಾರ್ಲಿ ಕ್ರಿಸ್ಟ್ ಮತ್ತು ರಹಮ್ ಇಮ್ಯಾನುಯೆಲ್ ಅವರಂಥ ಪುರುಷರ ಸೌಂದರ್ಯದ ಬಗ್ಗೆ ನಮಗೆ ಹೇಳಲಾಗುತ್ತಿತ್ತೇ ಹೊರತು, ಮಹಿಳೆಯರ ಸೌಂದರ್ಯದ ಬಗ್ಗೆ ಅಲ್ಲ. ಇದಕ್ಕೆ ಸೋನಿಯಾ ಗಾಂಧಿ ಅವರಂಥ ಒಬ್ಬಿಬ್ಬರು ಅಪವಾದ” ಎಂದು ಪುಸ್ತಕದಲ್ಲಿ ಹೇಳುವ ಮೂಲಕ ಸೋನಿಯಾಗಾಂಧಿಯವರ ಸೌಂದರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಹೊಗಳಿರುವ ಒಬಾಮಾ ಅವರದ್ದು ಬಹಳ ಗಟ್ಟಿಯಾದ ಪ್ರಾಮಾಣಿಕ ವ್ಯಕ್ತಿತ್ವ. ಅಮೆರಿಕದ ರಕ್ಷಣಾ ಸಚಿವ ಬಾಬ್ ಗೇಟ್ಸ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಬಹಳ ಪ್ರಾಮಾಣಿಕ ವ್ಯಕ್ತಿಗಳು ಎಂದಿದ್ದಾರೆ.
    ಇದೀಗ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್​ ಅವರು ಒಳ್ಳೆಯ ವ್ಯಕ್ತಿತ್ವವುಳ್ಳವರು ಎಂದು ಪುಸ್ತಕದಲ್ಲಿ ಉಲ್ಲೇಖಿಸಿರುವ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬಹಳ ಟಫ್ ಮತ್ತು ಸ್ಟ್ರೀಟ್ ಸ್ಮಾರ್ಟ್ ಎಂದು ಬಣ್ಣಿಸಿದ್ದಾರೆ.

    2015ರಲ್ಲಿ ಟೈಮ್ಸ್ ಮ್ಯಾಗಜಿನ್​ಗೆ ಬರೆದ ಲೇಖನದಲ್ಲಿ ಒಬಾಮಾ ಅವರು ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು. ಟೀ ಮಾರಿ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತಿದ್ದ ಒಬ್ಬ ಹುಡುಗ ಇವತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೊಗಳಿದ್ದರು. ಆದರೆ ಈ ಪುಸ್ತಕದಲ್ಲಿ ಅವರ ಬಗ್ಗೆ ಉಲ್ಲೇಖವಿಲ್ಲ ಎನ್ನಲಾಗಿದೆ.

    ಅಂದಹಾಗೆ ಬರಾಕ್ ಒಬಾಮ ಅವರು ಇದಾಗಲೇ ‘ಡ್ರೀಮ್ಸ್ ಫ್ರಮ್ ಮೈ ಫಾದರ್’, ‘ದಿ ಆಡಾಸಿಟಿ ಆಫ್ ಹೋಪ್’, ಮತ್ತು ‘ಚೇಂಜ್ ವಿ ಕ್ಯಾನ್ ಬಿಲೀವ್ ಇನ್’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

    ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಸುಳಿಯಲ್ಲಿ ಶಾಸಕರ ಪತ್ನಿ!

    ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಗೆ ‘ಆಪ್ತ’ನಾಗಿದ್ದ ಐಪಿಎಸ್​ ಅಧಿಕಾರಿ ಸಸ್ಪೆಂಡ್​

    ಸೈಕಲ್​ ಕವಿ ಎಂದೇ ಪ್ರಸಿದ್ಧರಾದ ಆಶುಕವಿ ಐರಸಂಗ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts