More

    ರಾಹುಲ್ ಗಾಂಧಿ ಹೂಡಿಕೆ ಮಾಡಿದ ಟಾಟಾ ಷೇರು ನೀವು ಖರೀದಿಸುತ್ತೀರಾ?: ಲಾಭವಾಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಮುಂಬೈ: ರಾಹುಲ್ ಗಾಂಧಿ ಅವರು ಟಾಟಾ ಗ್ರೂಪ್ ಕಂಪನಿ ಟೈಟಾನ್‌ನ 897 ಷೇರುಗಳನ್ನು ಹೊಂದಿದ್ದಾರೆ, ಇದರ ಮೌಲ್ಯ ರೂ. 32.59 ಲಕ್ಷ.

    2023-24ನೇ ಹಣಕಾಸು ವರ್ಷ ಮೂರನೇ ತ್ರೈಮಾಸಿಕದಲ್ಲಿ (Q3FY24) ಕಂಪನಿಯ ಬಲವಾದ ಕಾರ್ಯಕ್ಷಮತೆಯ ನಂತರ ಟಾಟಾ-ಮಾಲೀಕತ್ವದ ಈ ಷೇರು ಹೂಡಿಕೆದಾರರ ನೆಚ್ಚಿನ ಸ್ಟಾಕ್​ ಆಗಿದೆ.

    ಡಿಸೆಂಬರ್ 31, 2023ರ ಮಾಹಿತಿ ಪ್ರಕಾರ, ಸುಪ್ರಸಿದ್ಧ ಹೂಡಿಕೆದಾರರಾದ ರೇಖಾ ಜುಂಜುನ್ವಾಲಾ ಅವರು ಟಾಟಾ ಗ್ರೂಪ್​ನ ಈ ಕಂಪನಿಯಲ್ಲಿ 5.37 ಶೇಕಡಾ ಪಾಲನ್ನು ಹೊಂದಿದ್ದಾರೆ.

    ಗುರುವಾರದ ವಹಿವಾಟಿನಲ್ಲಿ ಟೈಟಾನ್ ಕಂಪನಿ ಲಿಮಿಟೆಡ್‌ನ ಷೇರುಗಳ ಬೆಲೆ ಶೇಕಡಾ 1.98 ರಷ್ಟು ಏರಿಕೆಯಾಗಿ 3,786.50 ರೂ. ತಲುಪಿದೆ.

    ಇದು ಮಲ್ಟಿಬ್ಯಾಗರ್ ಸ್ಟಾಕ್‌ ಆಗಿದೆ. ಕಳೆದ 10 ವರ್ಷಗಳಲ್ಲಿ 1,300 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ. ಇದು ಕಳೆದ 6 ತಿಂಗಳಲ್ಲಿ ಶೇಕಡಾ 18 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದರ 52 ವಾರಗಳ ಕನಿಷ್ಠ ಬೆಲೆ 2,545 ಹಾಗೂ ಗರಿಷ್ಠ ಬೆಲೆ 3,885 ರೂ. ಇದೆ.

    ಬ್ರೋಕರೇಜ್ ಅಭಿಪ್ರಾಯವೇನು?:

    ಮೋತಿಲಾಲ್ ಓಸ್ವಾಲ್ ಬ್ರೋಕರೇಜ್​ ಸಂಸ್ಥೆಯು ಈ ಟಾಟಾ ಗ್ರೂಪ್ ಕಂಪನಿಯಲ್ಲಿ 65x FY26 EPS ಆಧಾರದ ಮೇಲೆ ರೂ 4,300 ಗುರಿ ಬೆಲೆಯೊಂದಿಗೆ ‘ಖರೀದಿ’ ರೇಟಿಂಗ್ ನೀಡಿದೆ.

    ಡಿಸೆಂಬರ್ 2022 ರ ತ್ರೈಮಾಸಿಕದಲ್ಲಿ 951 ಕೋಟಿ ರೂಪಾಯಿ ಲಾಭವನ್ನು ಈ ಕಂಪನಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ 2023ರ ಡಿಸೆಂಬರ್​ ತ್ರೈಮಾಸಿಕದಲ್ಲಿ ಲಾಭವು ಶೇಕಡಾ 9.4 ರಷ್ಟು ಏರಿಕೆಯಾಗಿ 1,040 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪನಿ ವರದಿ ಮಾಡಿದೆ.

    ಹೆಸರಾಂತ ಟೆಲಿಕಾಂ ಕಂಪನಿ 12 ರೂಪಾಯಿಗೆ ಷೇರುಗಳನ್ನು ಮಾರಾಟ ಮಾಡುತ್ತಿರುವುದೇಕೆ? ಎಫ್​ಪಿಒ ಎಂದರೇನು?


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts