More

    ವಿಶ್ವದ ಅತಿದೊಡ್ಡ ಫಂಡ್​ ಮ್ಯಾನೇಜರ್ ಕಂಪನಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ 60% ನಷ್ಟ ಅನುಭವಿಸಿದ್ದೇಕೆ?

    ಮುಂಬೈ: ವಿಶ್ವದ ಫಂಡ್​ ಮ್ಯಾನೇಜರ್ ಕಂಪನಿಯಲ್ಲಿ ವ್ಯಾನ್‌ಗಾರ್ಡ್ ಗ್ರೂಪ್‌ ಒಂದಾಗಿದೆ. ಆದರೆ, ಈ ಕಂಪನಿಯು ಭಾರತೀಯ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಬಂಡವಾಳವು ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. 26 ಷೇರುಗಳಲ್ಲಿ ಅಂದಾಜು 60% ನಷ್ಟು ದೊಡ್ಡ ನಷ್ಟವನ್ನು ಈ ಕಂಪನಿ ಅನುಭವಿಸಿದೆ.

    ವ್ಯಾನ್‌ಗಾರ್ಡ್ ತನ್ನ ವಿವಿಧ ನಿಧಿಗಳ ಮೂಲಕ ಅಂದಾಜು 36,000 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ಹೊಂದಿದೆ. 2024ರ ಆರಂಭದಿಂದ ಇದುವರೆಗೆ ಈ ಕಂಪನಿಗಳ ಷೇರು ಪೋರ್ಟ್​ಫೋಲಿಯೋ ಮೌಲ್ಯವು ರೂ 664 ಕೋಟಿಗಳಷ್ಟು ಕುಸಿದಿದೆ ಎಂದು ಎಸಿಇ ಇಕ್ವಿಟಿ ಡೇಟಾ ತೋರಿಸುತ್ತದೆ.

    ವ್ಯಾನ್‌ಗಾರ್ಡ್‌ನ ಭಾರತೀಯ ಹೋಲ್ಡಿಂಗ್ಸ್ ಕಂಪನಿಗೆ ಸೇರಿದ 26 ಷೇರುಗಳ ಪೈಕಿ 15 ನಷ್ಟ ಅನುಭವಿಸಿವೆ. ಈ ಷೇರುಗಳಲ್ಲಿನ ನಷ್ಟವು ಈ ವರ್ಷದ ಆರಂಭದಿಂದ ಇದುವರೆಗಿನ ಅವಧಿಯಲ್ಲಿ 149%ರಷ್ಟು ಆಗಿದೆ.

    ಅಮೆರಿಕ ನೋಂದಾಯಿತ ಜಾಗತಿಕ ಹೂಡಿಕೆ ಸಲಹೆಗಾರ ಸಂಸ್ಥೆ ಬ್ಲ್ಯಾಕ್‌ರಾಕ್‌ ನಂತರದಲ್ಲಿ 8.7 ಲಕ್ಷ ಕೋಟಿ ಡಾಲರ್​ಗೂ ಅಧಿಕ ಆಸ್ತಿಯನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಫಂಡ್​ ಮ್ಯಾನೇಜಿಂಗ್​ ಕಂಪನಿಯಾಗಿದೆ ವ್ಯಾನ್​ಗಾರ್ಡ್​

    ವ್ಯಾನ್​ಗಾರ್ಡ್​ ಕಂಪನಿಯು ಹೂಡಿಕೆ ಮಾಡಿದ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸ್ಟಾಕ್ 2024 ರಲ್ಲಿ 148.5% ಕುಸಿಯುವುದರೊಂದಿಗೆ ಅತಿಹೆಚ್ಚು ನಷ್ಟಕ್ಕೀಡಾದ ಹೂಡಿಕೆಯಾಗಿದೆ. ಸೋನಿ ಜೊತೆಗಿನ ವಿಲೀನ ವಿಫಲವಾದ ಸುದ್ದಿಯ ನಂತರ ಈ ಕಂಪನಿಯ ಷೇರುಗಳ ಬೆಲೆ ಕುಸಿತ ಕಂಡಿದೆ. ಕಳೆದ ವಾರ, ಕಂಪನಿಯು ರಚಿಸಿದ ಪರಿಶೀಲನಾ ಸಮಿತಿಯು ತನ್ನ ವ್ಯವಹಾರದಲ್ಲಿನ ನಷ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸೂಚಿಸಿದ ನಂತರ ZEE ತನ್ನ 50% ಟೆಕ್ನಾಲಜಿ ಮತ್ತು ಇನ್ನೋವೇಶನ್ ಸೆಂಟರ್ (TIC) ಉದ್ಯೋಗಿಗಳನ್ನು ಬೆಂಗಳೂರಿನಲ್ಲಿ ವಜಾಗೊಳಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ವ್ಯಾನ್‌ಗಾರ್ಡ್ ಮಾಧ್ಯಮ ಸ್ಟಾಕ್‌ನಲ್ಲಿ 1.53% ಪಾಲನ್ನು ಹೊಂದಿತ್ತು.

    ವ್ಯಾನ್‌ಗಾರ್ಡ್‌ನ ಪೋರ್ಟ್‌ಫೋಲಿಯೊದ ಷೇರುಗಳ ಪೈಕಿ ಕುಸಿತದ ಕಂಡಿರುವ ಇತರ ಸ್ಟಾಕ್​ಗಳಲ್ಲಿ ಬ್ರೈಟ್‌ಕಾಮ್ ಗ್ರೂಪ್ 57.5% ರಷ್ಟು ಕಡಿಮೆಯಾಗಿದೆ. ಇದರ ನಂತರ, GHCL ಸಹ 47% ನಷ್ಟು ದೊಡ್ಡ ಕುಸಿತದಲ್ಲಿದೆ.

    ಆದ್ಯತೆಯ ಷೇರು ಹಂಚಿಕೆಯಲ್ಲಿನ ಅಕ್ರಮಗಳಿಗಾಗಿ ಬ್ರೈಟ್‌ಕಾಮ್ ಸ್ಟಾಕ್ ಸೆಬಿಯ ಸ್ಕ್ಯಾನರ್ ಅಡಿಯಲ್ಲಿ ಬಂದ ನಂತರ ಈ ಕಂಪನಿಯ ಷೇರು ಬೆಲೆ ಕುಸಿತವಾಗಿದೆ.

    RBL ಬ್ಯಾಂಕ್, ಕ್ರಾಂಪ್ಟನ್ ಗ್ರೀವ್ಸ್, ಸೈಯೆಂಟ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, IDFC, Coforge ಮತ್ತು UPL- ಈ ಕಂಪನಿಯ ಷೇರುಗಳು ವ್ಯಾನ್‌ಗಾರ್ಡ್‌ನ ಇಂಡಿಯಾ ಪೋರ್ಟ್‌ಫೋಲಿಯೊದಲ್ಲಿದ್ದು, ಈ ಷೇರುಗಳ ಬೆಲೆಯಲ್ಲಿ ಈ ವರ್ಷದ ಆರಂಭದಿಂದ ಇದುವರೆಗೆ 20% ಕುಸಿತವಾಗಿದೆ.

    ಕಳಪೆ ಪ್ರದರ್ಶನ ನೀಡುವ ಬ್ಲೂಚಿಪ್‌ಗಳಲ್ಲಿ ಈ ವರ್ಷ 9.9% ನಷ್ಟು ಕಳೆದುಕೊಂಡಿರುವ ಆಕ್ಸಿಸ್ ಬ್ಯಾಂಕ್ ಮತ್ತು 5.71% ನಷ್ಟು ಕುಸಿದಿರುವ ಇನ್ಫೋಸಿಸ್​ನಲ್ಲಿ ಕೂಡ ವ್ಯಾನ್​ಗಾರ್ಡ್​ ಹೂಡಿಕೆ ಮಾಡಿದೆ.

    ವ್ಯಾನ್‌ಗಾರ್ಡ್‌ನ ಪೋರ್ಟ್‌ಫೋಲಿಯೊದಲ್ಲಿ ಇರುವ ಷೇರುಗಳ ಪೈಕಿ ಹೆಚ್ಚು ಲಾಭ ತಂದುಕೊಟ್ಟಿರುವುದು ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್. ರಿಯಲ್ ಎಸ್ಟೇಟ್ ಷೇರುಗಳಲ್ಲಿನ ತೀವ್ರ ಏರಿಕೆಯ ನಂತರ, ಈ ವರ್ಷ ಸ್ಟಾಕ್ 66% ಹೆಚ್ಚಾಗಿದೆ. ಅಲ್ಲದೆ, ಬುಧವಾರದಂದು ತನ್ನ ಹೊಸ 52 ವಾರಗಳ ಗರಿಷ್ಠ ಬೆಲೆ ಮಟ್ಟವನ್ನು ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts