

ಮಂಡ್ಯ: ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಪಾತ್ರ ಶೇ.100ರಷ್ಟು ಇದೆ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಅವರನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿರಿ ರಾಜ್ಯ ಸರ್ಕಾರಕ್ಕೆ ಬಂಪರ್ ಆಫರ್ ಕೊಟ್ಟ ಶಾಸಕ ಜಮೀರ್
ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ಗಳಿವೆ. ಅವರಿಗೆ ಸಾವಿರಾರು ಕೋಟಿ ರೂ. ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್‌ನಿಂದ. ವೈನ್ ಲಾಬಿ, ಡ್ರಗ್ಸ್ ಲಾಬಿ ರಾಜಕೀಯವನ್ನು ಕೈಯಲ್ಲಿ ಹಿಡಿದುಕೊಂಡಿದೆ. ಈ ಮಾಫಿಯಾದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನವರೂ ಇದ್ದಾರೆ ಎಂದರು.
8 ಮತ್ತು 9ನೇ ತರಗತಿ ಮಕ್ಕಳವರೆಗೆ ಡ್ರಗ್ಸ್ ಪ್ರವೇಶ ಮಾಡಿದೆ. ಮೈಸೂರಿನ ಶಾಲೆಯಲ್ಲಿ ಒಬ್ಬ ಹುಡುಗ ಪೆನ್ ಮೂಸಿ ನೋಡುತ್ತಿದ್ದ. ಅದರೊಳಗೆ ಡ್ರಗ್ಸ್ ಇತ್ತು. ತನಿಖೆ ಮಾಡಿದ್ರೆ 10 ಜನ ವಿದ್ಯಾರ್ಥಿ ಆ ಜಾಲದಲ್ಲಿ ಇರುವುದು ಗೊತ್ತಾಯಿತು ಎನ್ನುವ ಮೂಲಕ ಡ್ರಗ್ಸ್ ಜಾಲದ ಭೀಕರತೆಯನ್ನು ಸೂಚ್ಯವಾಗಿ ವಿವರಿಸಿದರು.