More

    ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!

    ಹೊಳೆನರಸೀಪುರ: ಇಲ್ಲೊಬ್ಬ ಖತರ್ನಾಕ್​ ಯುವಕ ಗ್ರಾಮೀಣ ಭಾಗದಲ್ಲಿ ಒಂಟಿಮನೆ ಬಾಡಿಗೆ ಪಡೆದು ಮಾಡಬಾರದ್ದನ್ನು ಮಾಡಿ ತನ್ನ ಗ್ರಾಹಕರ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ ಒಂಟಿ‌ ಮನೆಯೊಂದನ್ನು ಚನ್ನರಾಯಪಟ್ಟಣ ತಾಲೂಕು ಹೊನ್ನಶೆಟ್ಟಿಹಳ್ಳಿಯ ಎಚ್.ವಿ.ಸುಹಾಸ್ ಬಾಡಿಗೆಗೆ ಪಡೆದಿದ್ದ. ಒಂಟಿ ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಪ್ಲ್ಯಾನ್​ ಮಾಡಿಯೇ ಇಲ್ಲಿ ಮನೆ ಬಾಡಿಗೆ ಪಡೆದ ಆತ ಹುಕ್ಕಾ ಬಾರ್ ಪಾರ್ಟಿ ನಡೆಸುತ್ತಿದ್ದ. ಇದನ್ನೂ ಓದಿರಿ ಮಾಜಿ ಶಾಸಕರೊಬ್ಬರ ಮಗ ಆತ್ಮಹತ್ಯೆ

    ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!ಒಂಟಿ ಮನೆಯನ್ನು ಬಾಡಿಗೆ ಪಡೆದು ಹುಕ್ಕಾ ಬಾರ್ ನಡೆಸುತ್ತಿದ್ದ ಸುಹಾಸ್, ತನ್ನದೇ ಗ್ರಾಹಕರನ್ನು ಹೊಂದಿದ್ದ. ಗ್ರಾಮೀಣ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬರುವುದಿಲ್ಲ ಎಂದು ಭಾವಿಸಿದ್ದ.

    ಖಚಿತ ಮಾಹಿತಿ ಆಧರಿಸಿ ಸೋಮವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು ಗಾಂಜಾ ಸೇವಿಸುತ್ತಿದ್ದ 6 ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಸುಹಾಸ್​ನನ್ನು ಬಂಧಿಸಲಾಗಿದೆ. ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

    ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ಸರ್ಕಲ್​ ಇನ್​ಸ್ಪೆಕ್ಟರ್ ಆರ್.ಪಿ. ಅಶೋಕ್, ಪಿಎಸ್ಐ ಮೋಹನ್ ಕೃಷ್ಣ ಮತ್ತು ಕುಮಾರ್​ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

    video/ ನಟಿ ಸಂಜನಾ ಬಂಧನ ಬೆನ್ನಲ್ಲೇ ವಿಡಿಯೋವೊಂದು ವೈರಲ್​

    ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts