ಚಿತ್ತಾಪುರ: ವಿಶ್ವಗುರು ಬಸವೇಶ್ವರರ ಭಾವಚಿತ್ರವಿರುವ ಬ್ಯಾನರ್ಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಕ, ಗಡಿಪಾರು ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಒತ್ತಾಯಿಸಿದೆ.
ಈ ಕುರಿತು ತಹಸೀಲ್ದಾರ್ಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಬಸವೇಶ್ವರ ಜಯಂತಿ ನಿಮಿತ್ತ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ಬ್ಯಾನರ್ ಅಳವಡಿಸಲಾಗಿತ್ತು. ಮೇ ೧೧ರಂದು ರಾತ್ರಿ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿ, ಅವಮಾನಿಸಿದ್ದಾರೆ. ಇದು ಬಸವಾಭಿಮಾನಿಗಳು ನೋವುಂಟು ಮಾಡಿದೆ ಎಂದು ಕಿಡಿಕಾರಿದರು.
ಜಿಲ್ಲೆ ಮತ್ತು ತಾಲೂಕಿನಲ್ಲಿ ಲಿಂಗಾಯತ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ವಿಶ್ವಗುರು ಬಸವೇಶ್ವರರ ಭಾವಚಿತ್ರವಿರುವ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೆಕು. ಕಠಿಣ ಶಿಕ್ಷಗೆ ಒಳಪಡಿಸಬೇಕು. ಆಸ್ತಿ ಮುಟ್ಟುಗೋಲು ಹಾಕಿ ಗಡಿಪಾರು ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ನಾಗರೆಡ್ಡಿ ಗೋಪಸೇನ್, ಅಶೋಕ ನಿಪ್ಪಾಣಿ, ಆನಂದ ಪಾಟೀಲ್ ನರಿಬೋಳ, ರವೀಂದ್ರ ಸಜ್ಜನಶೆಟ್ಟಿ, ಕೋಟೇಶ್ವರ ರೇಷ್ಮಿ, ಶ್ರೀನಿವಾಸರೆಡ್ಡಿ ಪಾಲಪ್, ಅನಿಲ್ ವಡ್ಡಡಗಿ, ನಾಗರಾಜ ರೇಷ್ಮಿ,ನಿಹಾಲ್ ಪಾಟೀಲ್ ಬೆಳಗುಂಪಾ, ಪ್ರಸಾದ ಅವಂಟಿ, ಮಹೇಶ ಬಟಗೇರಿ, ಸಂತೋಷ ಹಾವೇರಿ, ಮಹೇಶ ರೇಷ್ಮಿ, ಬಸವರಾಜ ಬೊಮ್ಮನಹಳ್ಳಿ ಇತರರಿದ್ದರು.
ತಹಸೀಲ್ದಾರ್ ಅಂಬರೀಶ ಬಿರಾದಾರಗೆ ಮನವಿಪತ್ರ ಸಲ್ಲಿಸಲಾಯಿತು.