

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಟೆನ್ಷನ್ ಶುರುವಾಗಿದೆ.
ಗಾಂಧಿ ಭವನ ರಸ್ತೆಯಲ್ಲಿ ಇರುವ ತಮ್ಮ ನಿವಾಸಕ್ಕೆ ಜಮೀರ್ರನ್ನು ಕರೆಸಿಕೊಂಡ ಸಿದ್ದರಾಮಯ್ಯ, 'ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ. ಪ್ರತಿ ಬಾರಿಯೂ ನಿನ್ನ ಹೆಸರು ಬರುತ್ತೆ' ಎಂದು ಪಶ್ನಿಸಿದ್ದಾರೆ.
'ಈ ಹಿಂದೆ ಪಾದರಾಯನಪುರ, ಡಿಜೆ ಹಳ್ಳಿ ಗಲಭೆಯಲ್ಲೂ ನಿನ್ನ ಹೆಸರು ಕೇಳಿಬಂತು. ಇದೀಗ ಡ್ರಗ್ಸ್ ಕೇಸ್ನಲ್ಲೂ ನಿನ್ನದೇ ಹೆಸರು ಬರ್ತಿದೆ' ಎಂದ ಸಿದ್ದರಾಮಯ್ಯ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿದರು. ಇದನ್ನೂ ಓದಿರಿ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮೊದಲು ಬೆಂಕಿ ಇಟ್ಟವ ಪೊಲೀಸರಿಗೆ ಸಿಕ್ಕಿಬಿದ್ದದ್ದೇ ರೋಚಕ!
ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್, 'ಆರೋಪ ಮಾಡುತ್ತಿರುವ ವ್ಯಕ್ತಿಯೂ ಗೊತ್ತಿಲ್ಲ. ಆ ಸಂಜನಾ ಕೂಡ ನನಗೆ ಗೊತ್ತಿಲ್ಲ ಸರ್. ಆದರೂ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಸಂಬಂಧ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಿಮಿನಲ್ ಒಳಸಂಚು, ಉದ್ದೇಶಪೂರ್ವಕವಾಗಿ ಅಪಮಾನ, ನಕಲಿ ದಾಖಲೆ ಸೃಷ್ಟಿ, ಉದ್ದೇಶ ಪೂರ್ವಕವಾಗಿ ದುಷ್ಕೃತ್ಯ ಎಸಗಿರುವ ಬಗ್ಗೆ ಕೇಸ್ ದಾಖಲಿಸಿಸುವೆ' ಎಂದು ವಿವರಿಸಿದರು.
ಮೂರ್ನಾಲ್ಕು ದಿನದ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷಕ್ಕೆ ಡ್ಯಾಮೇಜ್ ತರುವವರ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಆಗದಂತೆ ಎಚ್ಚೆತ್ತುಕೊಳ್ಳಿ ಎಂದು ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದರು.