More

    ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮೊದಲು ಬೆಂಕಿ ಇಟ್ಟವ ಪೊಲೀಸರಿಗೆ ಸಿಕ್ಕಿಬಿದ್ದದ್ದೇ ರೋಚಕ!

    ಬೆಂಗಳೂರು: ಡಿಜೆ ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

    ವಾಟರ್ ಮ್ಯಾನ್ ಕೆಲಸ ಮಾಡಿಕೊಂಡಿದ್ದವನೇ ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಡಿಜೆ ಹಳ್ಳಿ ಠಾಣೆ ಬಳಿಯಿಂದ ಶಾಸಕರ ಮನೆಯತ್ತ ಕರೆದೊಯ್ದಿದ್ದ. ಶಾಸಕರ ವಿರುದ್ಧ ಪ್ರಚೋದಿಸಿ ಮನೆಗೆ ನುಗ್ಗಿ ಮೊದಲು ಈತನೇ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಎಸ್ಕೇಪ್​ ಆಗಿದ್ದ ಆರೋಪಿ ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ಕೊನಗೂ ಆತ ಬೆಂಗಳೂರಿನಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನೇ ಮುಜಾಯಿದ್ ಅಲಿಯಾಸ್​ ವಾಟರ್ ಮುಜ್ಜು.

    ಇದನ್ನೂ ಓದಿರಿ ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಶಾಸಕರ ಸಂಬಂಧಿ ನವೀನ್ ಫೇಸ್​ಬುಕ್​ನಲ್ಲಿ ಮಾಡಿದ್ದ ಪೋಸ್ಟ್ ಅನ್ನೇ ನೆಪವಾಗಿಸಿಕೊಂಡು ನೂರಾರು ಹುಡುಗರನ್ನು ಶಾಸಕರ ವಿರುದ್ಧ ಎತ್ತಿಕಟ್ಟಿದ್ದ. ಪೊಲೀಸ್​ ಠಾಣೆ ಬಳಿಯಿಂದ ಅವರನ್ನು ಶಾಸಕರ ಮನೆ ಬಳಿಗೆ ಕರೆತಂದ ಆತ ಅಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನ ಧ್ವಂಸ ಮಾಡಿ, ಮನೆಗೆ ಬೆಂಕಿ ಹಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದ.

    ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮೊದಲು ಬೆಂಕಿ ಇಟ್ಟವ ಪೊಲೀಸರಿಗೆ ಸಿಕ್ಕಿಬಿದ್ದದ್ದೇ ರೋಚಕ!
    ಮುಜಾಯಿದ್ ಅಲಿಯಾಸ್​ ವಾಟರ್ ಮುಜ್ಜು

    ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ವಾಟರ್ ಮುಜ್ಜು ಬಗ್ಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅನುಮಾನ ವ್ಯಕ್ತಪಡಿಸಿದ್ದರು. ಕಳೆದ ಇಪ್ಪತ್ತೈದು ದಿನದಿಂದ ಆರೋಪಿ ಮುಜ್ಜುಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮೊಬೈಲ್ ಸ್ವಿಚ್ಡ್ ಆಫ್​ ಮಾಡಿಕೊಂಡು ಕೋಲಾರ, ಮುಳಬಾಗಿಲು, ರಾಮನಗರ… ಹಲವು ಜಿಲ್ಲೆಗಳಲ್ಲಿ ಒಂದೊಂದು ದಿನ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ.

    ಡ್ರಗ್ಸ್ ಮಾಫಿಯಾ ಪತ್ತೆ ಹಚ್ಚುವಲ್ಲಿ ಪೊಲೀಸರು ಬಿಜಿಯಾಗಿದ್ದಾರೆ. ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮನ್ನು ಮರೆತಿರುತ್ತಾರೆ ಎಂದು ಭಾವಿಸಿ ಬೆಂಗಳೂರಿಗೆ ಮುಜ್ಜು ವಾಪಸ್ ಆಗಿದ್ದ. ಆರೋಪಿ ಬಗ್ಗೆ ತೀವ್ರ ನಿಗಾ ವಹಿಸಿದ್ದ ಪೊಲೀಸರು ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಮಜ್ಜುನನ್ನು ಬಂಧಿಸಿದ್ದಾರೆ. ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡಿಕೊಂಡಿದ್ದ ಮಜ್ಜು ಮಾಜಿ ಮೇಯರ್ ಸಂಪತ್ ರಾಜ್​ಗೂ ಪರಿಚಿತ.

    ನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!

    ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts