ಹ್ಯಾಶ್​ಟ್ಯಾಗ್​ ಬಳಸಿ 'ವೇಕ್​ ಅಪ್​ ಟೀಮ್​ ಸಲಾರ್'​ ಎಂದ ಪ್ರಭಾಸ್​ ಫ್ಯಾನ್ಸ್​; ಅಷ್ಟಕ್ಕೂ ಹೀಗೆ ಹೇಳಲು ಕಾರಣವೇನು?

Untitled design - 2023-08-15T160040.305
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ, ರೆಬೆಲ್​ ಸ್ಟಾರ್​ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಸಲಾರ್​ ಬಗ್ಗೆ ಇದೀಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ವ್ಯಕ್ತವಾಗುತ್ತಿದೆ.

ಈ ಹಿಂದೆಯೇ ಚಿತ್ರತಂಡ ತಿಳಿಸಿರುವಂತೆ ಸಿನಿಮಾ ಇದೇ ಸೆಪ್ಟಂಬರ್​ 28 ರಂದು ಬಿಡುಗಡೆಯಾಗಲಿದೆ. ಆದ್ರೆ, ಈ ಮಧ್ಯೆ ಪ್ರಭಾಸ್​ ಫ್ಯಾನ್ಸ್​ ಚಿತ್ರದ ಬಗ್ಗೆ ಯಾವುದೇ ಮಾಹಿತಿಯೂ ಹೊರಬೀಳುತ್ತಿಲ್ಲ ಎಂದು ಬೇಸರಗೊಂಡು, ಸಾಮಾಜಿಕ ಜಾಲತಾಣದಲ್ಲಿ #wakeupteamSALAAR ಎಂಬ ಹ್ಯಾಶ್​ಟ್ಯಾಗ್​ನಡಿ ತಮ್ಮ ಆಗ್ರಹವನ್ನು ಮುಂದಿಟ್ಟಿದ್ದಾರೆ.

ಈ ಹ್ಯಾಶ್​ಟ್ಯಾಗ್​ ಅನ್ನು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಮಾಡುತ್ತಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಅಧಿಕೃತ ಮಾಹಿತಿ ಯಾಕೆ ಪ್ರಕಟವಾಗುತ್ತಿಲ್ಲ. ಸಲಾರ್​ನ ಮೊದಲ ಸಾಂಗ್​ ಅನ್ನು ಬಿಡುಗಡೆಗೊಳಿಸಿ ಎಂದು ಚಿತ್ರತಂಡಕ್ಕೆ ಆಗ್ರಹಿಸಿದ್ದಾರೆ. ಮಾಹಿತಿಯ ಪ್ರಕಾರ, ಪ್ರಭಾಸ್​ ಅವರದ್ದು ಇನ್ನೂ ಮೂರು ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಚಿತ್ರದಲ್ಲಿ ಏಳು ಫೈಟಿಂಗ್​ ದೃಶ್ಯಗಳಿವೆ ಎಂದು ಹೇಳಲಾಗಿದೆ.

ಪ್ರಶಾಂತ್ ನೀಲ್​ ನಿರ್ದೇಶನದ ಸಲಾರ್​ ಚಿತ್ರದಲ್ಲಿ ಪ್ರಭಾಸ್​ ಮತ್ತು ಶ್ರುತಿ ಹಾಸನ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪೃಥ್ವಿರಾಜ್​ ಸುಕುಮಾರನ್​, ಶರಣ್​ ಶಕ್ತಿ, ಜಗಪತಿ ಬಾಬು, ಮೀನಾಕ್ಷಿ ಚೌಧರಿ, ಈಶ್ವರಿ ರಾವ್​ ಸೇರಿದಂತೆ ಮುಂತಾದ ನಟ-ನಟಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net