

ಆಂಧ್ರಪ್ರದೇಶ: ಇಂದು ದೇಶಾದ್ಯಂತ ಭಾರತೀಯರು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಟಾಲಿವುಡ್ನ ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್ ಕೂಡ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಮಗಳು ಆರ್ಹಾ ಮತ್ತು ಸಿಬ್ಬಂದಿಗಳೊಟ್ಟಿಗೆ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಧ್ವಜರೋಹಣ ಮಾಡಿ, ಸೆಲ್ಯೂಟ್ ಮಾಡಿದ ಅಲ್ಲು ಅರ್ಜುನ್, ಮಗಳು ಅರ್ಹಾ ಮತ್ತು ತಂಡದ ಇತರ ಸದಸ್ಯರೊಂದಿಗೆ ಬಿಳಿ ಚಿಕಂಕರಿ ಕುರ್ತಾ ಸೆಟ್ನಲ್ಲಿ 'ಸ್ಟೈಲಿಶ್' ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣ ಶಾಂತಿಯ ಸಂಕೇತವಾದ ಕಾರಣ ವೈಟ್ ಬಣ್ಣದ ಉಡುಗೆಯನ್ನು ತೊಟ್ಟಿದ್ದಾರೆ.
ದೇಶ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮದೇ ವಿಶೇಷ ಫ್ಯಾನ್ ಫಾಲೋಯಿಂಗ್ ಹೊಂದಿರುವ ಅಲ್ಲು ಅರ್ಜುನ್ ಅವರ ಫೋಟೋ ಮತ್ತು ವಿಡಿಯೋ ನೋಡಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).