ಆದಿಪುರುಷ್​ ಚಿತ್ರ ಚೆನ್ನಾಗಿಲ್ಲ ಎಂದಿದ್ದಕ್ಕೆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಭಾಸ್​ ಫ್ಯಾನ್ಸ್​

Assault
Published on

ಹೈದರಾಬಾದ್​: ಪ್ರಭಾಸ್​, ಸೈಫ್​ ಅಲಿ ಖಾನ್, ಕೃತಿ ಸನೊನ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ್​ ಶುಕ್ರವಾರ(ಜೂನ್​ 16) ರಂದು ವಿಶ್ವದಾದ್ಯಂತ ತೆರೆ ಕಂಡಿದೆ.

ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ಆದಿಪುರುಷ್ ಚಿತ್ರವು ಕಳಪೆ VFX ಸೇರಿದಂತೆ ಅನೇಕ ವಿಚಾರಗಳಿಗೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಜಾಗತಿಕವಾಗಿ 7,000ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬಿಡುಗಡೆ ಜೂನ್​ 16ರಂದು ಬಿಡುಗಡೆಯಾಗಿದೆ.

ಇನ್ನು ಚಿತ್ರದ ಕುರಿತು ಪ್ರೇಕ್ಷಕರೊಬ್ಬರು ಕೆಟ್ಟದಾಗಿ ಮಾತನಾಡಿದ್ಧಾರೆ ಎಂದು ಆರೋಪಿಸಿ ಪ್ರಭಾಸ್ ಅಭಿಮಾನಿಗಳು ಆತನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿರುವ ಘಟನೆ ಹೈದರಾಬಾದಿನ ಪ್ರಸಾದ್​ ಐಮ್ಯಾಕ್ಸ್​ ಥಿಯೇಟರ್​ನಲ್ಲಿ ನಡೆದಿದೆ.

ಚಿತ್ರ ವೀಕ್ಷಿಸಿದ ನಂತರ ಪ್ರೇಕ್ಷಕರೊಬ್ಬರು ಮಾಧ್ಯಮಗಳಿಗೆ ಸಿನಿಮಾದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಸಮಯದಲ್ಲಿ ವಿಎಫ್​ಎಕ್ಸ್​ ಕೆಟ್ಟದಾಗಿದ್ದು ಪ್ಲೇ ಸ್ಟೇಷನ್ನಲ್ಲಿ ಈ ರೀತಿ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಬಳಿಕ ರಾಮನ ಪಾತ್ರಕ್ಕೆ ಪ್ರಭಾಸ್​ ಸರಿಯಾಗಿ ಹೊಂದಿಕೊಂಡಿಲ್ಲ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.

ಈ ವೇಳೆ ಅಲ್ಲೇ ಇದ್ದ ಪ್ರಭಾಸ್​ ಅಭಿಮಾನಿಗಳು ಇದನ್ನು ಕೇಳಿಸಿಕೊಂಡು ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ್ದಕ್ಕೆ ಯುವಕನ ಮೇಲೆ ಗುಂಪುಗೂಡಿ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು ಅಭಿಮಾನಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net