ಕೇಂದ್ರಕ್ಕೆ ಹಸಿದ ಹೊಟ್ಟೆ‌ ತೋರಿಸಿದರೆ ಮಸೆದ ಕತ್ತಿ ತೋರಿಸದಿರುತ್ತದೆಯೇ: ದಿನೇಶ್​ ಗುಂಡೂರಾವ್

Dinesh Gundurao
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆ ಅನುಷ್ಠಾನದ ಕುರಿತಾಗಿ ಬಿಜೆಪಿ ನಾಯಕರ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಸರಣಿ ಟ್ವೀಟ್​ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ದಿನೇಶ್​ ರಾಜ್ಯಕ್ಕೆ ಅಕ್ಕಿ‌ ಮಾರಾಟ ಸ್ಥಗಿತ ಮಾಡಿರುವುದು ಆ ಬೆದರಿಕೆಯ ಭಾಗವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆ ಕಡಿತ ಎಮದು ಜೆ.ಪಿ. ನಡ್ಡಾ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದರು. ಅದರೂ ರಾಜ್ಯದ ಜನ ನಡ್ಡಾ ಬೆದರಿಕೆಗೆ ಜಗ್ಗದೆ BJP ಸೋಲಿಸಿದ್ದರು. ಕೇಂದ್ರ ಈಗ ರಾಜ್ಯಕ್ಕೆ ಅಕ್ಕಿ‌ ಮಾರಾಟ ಸ್ಥಗಿತ ಮಾಡಿರುವುದು ಆ ಬೆದರಿಕೆಯ ಭಾಗವೇ ಅಥವಾ ರಾಜ್ಯದ ಜನರ ಮೇಲೆ ಸೋಲಿನ ಪ್ರತಿಕಾರವೇ ಎಂದು ಕಿಡಿಕಾರಿದ್ಧಾರೆ. ‘

ಡಬಲ್ ಇಂಜಿನ್ ಸರ್ಕಾರವಿದ್ದಾಗಲೇ ಕೇಂದ್ರ ರಾಜ್ಯಕ್ಕೆ ಅನ್ಯಾಯ ಎಸಗಿದೆ. ಆಗ ನೆರೆ ಪರಿಹಾರಕ್ಕೂ ಸತಾಯಿಸಿದೆ, ಬರ ಪರಿಹಾರಕ್ಕೂ ಸತಾಯಿಸಿದೆ. GSTಯಲ್ಲಿ ಮೋಸ ಮಾಡಿದರು, ಬಾಕಿ ಕೊಡಲಿಲ್ಲ, ಪರಿಹಾರವನ್ನೂ ಕೊಡಲಿಲ್ಲ. ಈಗ ಡಬಲ್ ಇಂಜಿನ್ ಸರ್ಕಾರವಿಲ್ಲ. ಹೀಗಿರುವಾಗ ಕೇಂದ್ರಕ್ಕೆ ಹಸಿದ ಹೊಟ್ಟೆ‌ ತೋರಿಸಿದರೆ ಮಸೆದ ಕತ್ತಿ ತೋರಿಸದಿರುತ್ತದೆಯೇ ಎಂದು ಸಚಿವ ದಿನೇಶ್​ ಗುಂಡೂರಾವ್​ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net