ದಕ್ಷಿಣ ಕನ್ನಡ; ಉಳ್ಳಾಲದ ವ್ಯಕ್ತಿಗೆ 7 ಲಕ್ಷ ರೂ. ವಿದ್ಯುತ್​ ಬಿಲ್​ ನೀಡಿದ ಮೆಸ್ಕಾಂ ಸಿಬ್ಬಂದಿ

Mescom bill
Published on

ದಕ್ಷಿಣ ಕನ್ನಡ: ಮೀಟರ್​ ರೀಡರ್​ ಮಾಡಿದ ತಪ್ಪು ಗ್ರಹಿಕೆಯಿಂದಾಗಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂ. ಕರೆಂಟ್​ ಬಿಲ್​ ಅನ್ನು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಕಬೈಲಿನ ನಿವಾಸಿ ಸದಾಶಿವ ಆಚಾರ್ಯ ಅವರಿಗೆ 7.71 ಲಕ್ಷ ರೂ. ಮೌಲ್ಯದ ಕರೆಂಟ್​ ಬಿಲ್​ ನೀಡುವ ಮೂಲಕ ಮೆಸ್ಕಾಂ ಮೀಟರ್ ರೀಡರ್​ ಶಾಕ್​ ಕೊಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸದಾಶಿವ ಆಚಾರ್ಯ ತಿಂಗಳಿಗೆ ನಮ್ಮ ಮನೆಯ ಕರೆಂಟ್​ ಬಿಲ್​ ಸರಾಸರಿ ಮೂರು ಸಾವಿರ ರೂಪಾಯಿ ಬರುತ್ತಿತ್ತು. ಪ್ರತಿ ತಿಂಗಳು ಸರಿಯಾಗಿ ಮೊತ್ತವನ್ನು ಪಾವತ್ತಿಸುತ್ತಿದ್ದೆವು. ಮನೆಗೆ ಬಂದು ಮೀಟರ್​ ರೀಡ್​ ಮಾಡಿದ ಬಳಿಕ ಮೆಸ್ಕಾಂ ಅಧಿಕಾರಿಯೂ 99,338 ಯೂನಿಟ್ ಬಳಸಲಾಗಿದೆ ಎಂದು ಹೇಳಿ 7,71,072 ಲಕ್ಷ ರೂ. ಮೊತ್ತದ ಬಿಲ್​ಅನನ್ಉ ನೀಡಿ ಹೊರಟು ಹೋದರು.

ಆ ಬಳಿಕ ಮೆಸ್ಕಾಂ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದಾಗ ಎಚ್ಚೆತ್ತ ಅಧಿಕಾರಿಗಳು ತಮ್ಮ ತಪ್ಪನ್ನು ಸರಿ ಮಾಡಿಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್​ಅನ್ನು ನೀಡಿದ್ದರು ಎಂದು ಸದಾಶಿವ ಆಚಾರ್ಯ ತಿಳಿಸಿದ್ದಾರೆ.

ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದಯಾನಂದ್​​ ಪ್ರತಿಕ್ರಿಯಿಸಿ ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್​ ಮಾಡಿಸಿ ಬಿಲ್​ ವಿತರಿಸಲಾಗುತ್ತದೆ. ಬಿಲ್​ಅಲ್ಲಿ ಲೋಪ ಕಂಡು ಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ, ಸಿಬ್ಬಂದಿ ತಿಳಿಯದೆ ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ಲೋಪವನ್ನು ಸರಿಪಡಿಸಿ ಪರಷ್ಕೃತ ಬಿಲ್​ಅನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net