ವಿಜಯಪುರ; ಮಾರಕಾಸ್ತ್ರಗಳಿಂದ ಯುವತಿ ಬರ್ಬರ ಹತ್ಯೆ

Bijapur Murder
Published on

ವಿಜಯಪುರ: ನಡು ರಸ್ತೆಯಲ್ಲೇ ಯುವತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊರವಲಯದಲ್ಲಿ ನಡೆದಿದೆ.

ಮೃತರನ್ನು ಗಂಗೂಭಾಯಿ ಯಂಕಂಚಿ (28) ಎಂದು ಗುರುತಿಸಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿಂದಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Bijapur Murder

ಅಪರಿಚಿತ ದುಷ್ಕರ್ಮಿಗಳು ಯುವತಿಯ ಮೇಲೆ ದಾಳಿ ನಡೆಸಿದ್ದು, ಆಕೆಯ ಕುತ್ತಿಗೆಯಲ್ಲಿ ಚಾಕು ಬಿಟ್ಟು ಪರಾರಿಯಾಗಿದ್ದಾರೆ. ಕೆಲ ಒಂದರ ಮೇಲೆ ಹೊರ ಹೋಗಿದ್ದ ಗಂಗೂಭಾಯಿ ಸಿಂಧಗಿ ಪಟ್ಟಣಕ್ಕೆ ವಾಪಸ್​ ಆಗುವ ವೇಳೆ ಘಟನೆ ನಡೆದಿದ್ದು

ಯುವತಿಯನ್ನು ಹತ್ಯೆ ಮಾಡಿದ ಬಳಿಕ ದುಷ್ಕರ್ಮಿಗಳು ಆಕೆಯ ಸ್ಕೂಟಿಯನ್ನು ಕೊಂಡೊಯ್ದಿದ್ದು, ಹಂತಕರ ಪತ್ತೆಗಾಗಿ ಸಿಂದಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net