More

    ಮನೆ ನೋಡುವ ನೆಪದಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ; ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ವಿಲಕ್ಷಣಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ ಮಾಡಿಕೊಳ್ಳುತ್ತಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿ ಇರುವ ವಿಧಾನಸೌಧ ಲೇಔಟ್​ನಲ್ಲಿ ನಡೆದಿದೆ.

    ಕಾಮುಕನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ವಿರುದ್ಧ ರಾಜಗೋಪಾಲನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

    ಮನೆ ನೋಡುವ ನೆಪದಲ್ಲಿ ಕೃತ್ಯ

    ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ಆರೋಪಿಯೂ ಮಹಿಳೆಯರು ಒಬ್ಬಂಟಿಯಾಗಿರುವುದನ್ನು ಗಮನಿಸಿ ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವುದಾಗಿ ಹೇಳಿ ಪ್ರವೇಶಿಸುತ್ತಿದ್ದ. ಬಳಿಕ ವಾಶ್​ರೂಂ ಬಳಸುವುದಾಗಿ ಹೇಳಿ ಅವರ ಮನೆಯ ಬಾತರೂಂಗಳಲ್ಲಿ ಕ್ಯಾಮರಾಗಳನ್ನು ಇಟ್ಟು ಮಹಿಳೆಯರು ಸ್ನಾನ ಮಾಡುವ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ.

    ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕಳಿಸದ ಅತ್ತೆ; ಪ್ರಾಣಬಿಟ್ಟ ಅಳಿಯ

    ಬಳಿಕ ಮನೆಯನ್ನು ನೋಡುವ ನೆಪದಲ್ಲಿ ಟೆರೇಸ್​ ಹಾಗೂ ಬಟ್ಟೆ ಒಣ ಹಾಕುವ ಜಾಗಕ್ಕೆ ಹೋಗಿ ಅಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇತ್ತೀಚಿಗೆ ಇದೇ ರೀತಿ ಆರೋಪಿಯೂ ಮನೆ ನೋಡುವ ನೆಪದಲ್ಲಿ ಒಗೆಯಲು ಹಾಕಿದ್ದ ಬ್ಲೌಸ್​ ತೆಗೆದುಕೊಂಡು ಹಸ್ತಮೈಥುನ ಮಾಡುತ್ತಿದ್ದಾಗ ನೆರೆ ಮನೆಯವರು ಅಳವಿಡಿಸಿದ್ದ ಸಿಸಿಟಿವಿಯಲ್ಲಿ ದೈಶ್ಯ ಸೆರೆಯಾಗಿ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.

    ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts