

ಆಂಧ್ರಪ್ರದೇಶ: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ಯ ಬಿಡುಗಡೆಯತ್ತ ಮುಖ ಮಾಡಿದ್ದು, ಪ್ರಭಾಸ್ ಅವರ ಮೇಲೆ ಭಾರೀ ನಿರೀಕ್ಷೆಗಳು ಹೆಚ್ಚಿವೆ.
ಇದನ್ನೂ ಓದಿ: ಯೋಗದಿಂದ ಮನಸ್ಸಿನ ಹತೋಟಿ, ಸ್ವಾಮಿ ಜಿತಕಾಮಾನಂದ ಜೀ ಆಶಯ
ಈ ಮಧ್ಯೆ 'ಸಲಾರ್' ರಿಲೀಸ್ ಡಿಸೆಂಬರ್ ತಿಂಗಳಿಗೆ ಮುಂದೂಡಿಕೆಯಾಗಿದೆ. ಹಾಗಾಗಿ ಅಭಿಮಾನಿಗಳಲ್ಲಿ ಸದ್ಯ ತೀವ್ರ ಕುತೂಹಲ ಮೂಡಿರುವುದು ಅ.23 ರಂದು ಪ್ರಭಾಸ್ ಜನ್ಮದಿನಕ್ಕೆ ಸೈ-ಫೈ ಸಿನಿಮಾ 'ಕಲ್ಕಿ 2898 AD' ಅಧಿಕೃತ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ ಎಂಬ ಸಂಗತಿ.
ಅ. 23 ರಂದು 44ನೇ ವಸಂತಕ್ಕೆ ಕಾಲಿಡಲಿರುವ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಜನ್ಮದಿನಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು ಸಜ್ಜಾಗಿದ್ದಾರೆ. ಈಗಾಗಲೇ ಹಲವೆಡೆ ಪ್ರಭಾಸ್ ಜನ್ಮದಿನವನ್ನು ಮಧ್ಯರಾತ್ರಿಯಿಂದಲೇ ಆಚರಿಸಲು ಸಕಲ ತಯಾರಿಗಳನ್ನು ಕೂಡ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಗೃಹ ಸಚಿವರ ಕೋಪಕ್ಕೆ ಮೂವರು ಕಾನ್ಸ್ಟೇಬಲ್ ತಲೆದಂಡ!
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅಭಿನಯದ ಸೈನ್ಸ್-ಫಿಕ್ಷನ್ ಆಧರಿತ, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾದ ಅಧಿಕೃತ ರಿಲೀಸ್ ದಿನಾಂಕ ಪ್ರಭಾಸ್ ಹುಟ್ಟುಹಬ್ಬದ ದಿನವೇ ಪೋಸ್ಟರ್ ಮೂಲಕ ಘೋಷಣೆಯಾಗಲಿದೆ ಎಂಬ ವಿಷಯ ಸದ್ಯ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸದ್ಯ ಈ ಬಗ್ಗೆ ನಾಳೆ ಚಿತ್ರತಂಡ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ,(ಏಜೆನ್ಸೀಸ್).