'ದಿ ಗರ್ಲ್‌ಫ್ರೆಂಡ್' ಆಗಿ ರಶ್ಮಿಕಾ ಮಂದಣ್ಣ!

Untitled design - 2023-10-22T173138.196
Published on

ಆಂಧ್ರಪ್ರದೇಶ: ಟಾಲಿವುಡ್​ ಹಾಗೂ ಬಾಲಿವುಡ್​ ಸ್ಟಾರ್​ ನಟರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಮಹಿಳಾ ಪ್ರಧಾನ ಕಥೆ ಆಧರಿತ ಸಿನಿಮಾದಲ್ಲಿ ನಟಿಸಲಿದ್ದು, ಈ ಚಿತ್ರದ ಟೈಟಲ್​ ಮತ್ತು ಫಸ್ಟ್​ ಲುಕ್ ವಿಡಿಯೋ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ.

ಈ ಹಿಂದಿನಿಂದಲೂ ಮಹಿಳಾ ಪ್ರಧಾನ ಪ್ರಾಜೆಕ್ಟ್​ವೊಂದರಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದು ಯಾವ ಸಿನಿಮಾ, ಯಾರ ನಿರ್ದೇಶನ ಎಂಬ ಹಲವು ಸಂಗತಿಗಳು ಇಂದು ಚಿತ್ರತಂಡ ಘೋಷಿಸಿದ ಅಧಿಕೃತ ಮಾಹಿತಿ ಮೂಲಕ ಬಹಿರಂಗಗೊಂಡಿದೆ.

'ಮನ್ಮಧುಡು 2' ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್​ ಸಿಕ್ಕ ಬೆನ್ನಲ್ಲೇ ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ಮತ್ತೊಂದು ಸಿನಿಮಾದ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದು, 'ದಿ ಗರ್ಲ್​ಫ್ರೆಂಡ್' ಎಂಬ ಮಹಿಳಾ ಪ್ರಧಾನ​ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಟೈಟಲ್​ ಜತೆಗೆ ಗ್ಲಿಂಪ್ಸ್ ವಿಡಿಯೋ ಎರಡನ್ನೂ ಅನಾವರಣಗೊಳಿಸಿದ ನಿರ್ದೇಶಕರು, ಪ್ರೀತಿಯ ವಿಷಯವನ್ನು ವಿಶೇಷ ರೀತಿಯಲ್ಲಿ ತೋರಿಸುವ ಪ್ರಯತ್ನದಲ್ಲಿ ಹೆಜ್ಜೆಯಿಟ್ಟಿದ್ದಾರೆ ಎಂಬುದು ಫಸ್ಟ್​ ಲುಕ್​ ವಿಡಿಯೋ ಮುಖೇನ ತಿಳಿಯುತ್ತದೆ. ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ನೀರಿನಲ್ಲಿ ಮುಳುಗಿ, ಉಸಿರು ಬಿಗಿಹಿಡಿದುಕೊಂಡಿರುವ ಪರಿಸ್ಥಿತಿ ನೋಡಿದರೆ ಬೇರೂರಿದ ಕಥೆಯನ್ನು ಸಿನಿಮಾದ ಮುಖಾಂತರ ಹೇಳುವಂತಿದೆ.

‘ದಿ ಗರ್ಲ್‌ಫ್ರೆಂಡ್’ ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದ್ದು, ಈ ಚಿತ್ರವನ್ನು ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ನಿರ್ಮಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net