More

    ಯೋಗದಿಂದ ಮನಸ್ಸಿನ ಹತೋಟಿ, ಸ್ವಾಮಿ ಜಿತಕಾಮಾನಂದ ಜೀ ಆಶಯ

    ಮಂಗಳೂರು: ಮನಸ್ಸನ್ನು ಹತೋಟಿಯಲ್ಲಿಡುವುದೇ ಯೋಗ. ಮನಸ್ಸನ್ನು ಹತೋಟಿಯಲ್ಲಿ ಇರಿಸಿದರೆ ನೈಜ ಆನಂದ ಹಾಗೂ ನಮ್ಮ ಅಂತರಾತ್ಮ ಕಂಡುಕೊಳ್ಳಲು ಸಾಧ್ಯ ಎಂದು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಜೀ ಹೇಳಿದರು.

    ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

    ಜೀವನದಲ್ಲಿ ಬರುವ ಕೆಲವೊಂದು ಘಟನೆಗಳು ಮನಸ್ಸಿನ ಮೇಲೆ ಒತ್ತಡವನ್ನು ಉಂಟು ಮಾಡುತ್ತವೆ. ಇವುಗಳಿಂದ ಪಾರಾಗಲು ಯೋಗ ಸಹಕಾರಿಯಾಗುತ್ತವೆ ಎಂದು ಲಕ್ಷ್ಮಣ ಪೊದುವಾಳ್ ಹೇಳಿದರು.

    ಲೆಕ್ಕಪರಿಶೋಧಕ ಜಗನ್ನಾಥ ಕಾಮತ್, ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ, ಅವರ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ, ಸುರೇಶ್, ವೀಣಾ ಸುರೇಶ್ ಉಪಸ್ಥಿತರಿದ್ದರು.

    ರಾಮಕೃಷ್ಣ ಮಠದ ವತಿಯಿಂದ ಮುಂದಿನ ಯೋಗ ಶಿಬಿರ ನ.15ರಿಂದ ಆರಂಭವಾಗಲಿದೆ. ಆಸಕ್ತರು ರಾಮಕೃಷ್ಣ ಮಠದಲ್ಲಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ——-

    ಯೋಗ, ಧ್ಯಾನ, ಪ್ರಾಣಾಯಾಮ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯವಾದ ಅಂಶಗಳಾಗಿವೆ. ಮನಸ್ಸಿನಲ್ಲಿ ಉದ್ವೇಗ ಉಂಟಾದಾಗ ಮುದ್ರೆಗಳನ್ನು ಮಾಡಿ ಒತ್ತಡವನ್ನು ಹೋಗಲಾಡಿಸಬಹುದು.

    ಜಗನ್ನಾಥ ಕಾಮತ್ ಲೆಕ್ಕಪರಿಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts