More

    ಬಡವರ ಪರ ಕಾಂಗ್ರೆಸ್‌ಗಿಲ್ಲ ಕಾಳಜಿ: ಬಿವೈಆರ್ ಟೀಕೆ

    ಶಿವಮೊಗ್ಗ: ಪ್ರತಿ ಪ್ರಜೆಯ ಆರೋಗ್ಯ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 2015ರ ಜೂ.21 ಅನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದರು. ಇದು ರಾಷ್ಟ್ರದ ನಾಯಕನಿಗೆ ಪ್ರಜೆಗಳ ಆರೋಗ್ಯದ ಬಗ್ಗೆ ಇರುವ ಕಾಳಜಿಯ ಪ್ರತೀಕ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

    ನಗರದ ಶಿವಗಂಗಾ ಯೋಗ ಕೇಂದ್ರದಲ್ಲಿ ಬುಧವಾರ ಯೋಗಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 10 ವರ್ಷಗಳ ಹಿಂದೆಯೇ ಪ್ರಧಾನಿ ಅವರು ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯದ ಬಗ್ಗೆ ಚಿಂತನೆ ನಡೆಸಿದ್ದರು. ಇವರ ಚಿಂತನೆಯನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಂಡ ಪರಿಣಾಮ ವಿಶ್ವ ಯೋಗ ದಿನಾಚರಣೆ ನಡೆಯುತ್ತಿದೆ ಎಂದರು.
    ಈ ಮಹತ್ತರ ಕಾರ್ಯಕ್ಕೆ ಕಾರಣವಾದ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಎಲ್ಲರ ಬಯಕೆ. ಈ ಹಿನ್ನೆಲೆಯಲ್ಲಿ ಮೇ.7ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ. ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು.
    68 ವರ್ಷ ದೇಶವನ್ನಾಳಿದ ರಾಜಕೀಯ ಪಕ್ಷಗಳು ಬಡತನವನ್ನು ಪ್ರೀತಿಸಿದವೇ ಹೊರತು ಬಡವರನ್ನು ಪ್ರೀತಿಸಲಿಲ್ಲ. ಇದರ ಪರಿಣಾಮ ರಾಷ್ಟ್ರ ಅತ್ಯಂತ ಹಿಂದುಳಿದ ದೇಶಗಳ ಪಟ್ಟಿಗೆ ಸೇರುವಂತಾಗಿತ್ತು. 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮುಂದುವರಿಯುತ್ತಿರುವ ಮೊದಲ 5 ರಾಷ್ಟ್ರಗಳಲ್ಲಿ ಭಾರತ ಇರುವಂತೆ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಏರ್‌ವೇ, ರೈಲ್ವೆ, ಹೈವೇ ಸೇರಿ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ನನ್ನನ್ನು ಬೆಂಬಲಿಸುವ ಮೂಲಕ ಮೋದಿ ಕೈ ಬಲ ಪಡಿಸಬೇಕೆಂದು ಹೇಳಿದರು.
    ಶಿವಗಂಗಾ ಯೋಗ ಶಿಕ್ಷಣಾ ಕೇಂದ್ರದ ಯೋಗಗುರು ಸಿ.ವಿ.ರುದ್ರಾರಾಧ್ಯ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಜಿ.ವಿಜಯಕುಮಾರ್, ಜಗದೀಶ್, ಮಾಲತೇಶ್, ಅನಿತಾ ರವಿಶಂಕರ್, ಡಾ.ನಾಗರಾಜ ಪರಿಸರ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts