More

    ಧೋನಿ ಇಷ್ಟೊಂದು ಸ್ವಾರ್ಥಿಯಾದ್ರಾ? ಅವಮಾನ ಮಾಡಬಾರದಿತ್ತು, ಮಾಹಿ ವಿರುದ್ಧ ಫ್ಯಾನ್ಸ್​ ಟೀಕೆ

    ಚೆನ್ನೈ: ಟೀಮ್​ ಇಂಡಿಯಾ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ​ ಮಹೇಂದ್ರ ಸಿಂಗ್ ಧೋನಿ ಈಗಲೂ ವಿಶ್ವ ಕ್ರಿಕೆಟ್‌ನಲ್ಲಿ ಬೆಸ್ಟ್ ಫಿನಿಶರ್ ಎಂದೇ ಗುರುತಿಸಿಕೊಂಡಿದ್ದಾರೆ. ಯಾವುದೇ ವಿವಾದಗಳಿಗೆ ಒಳಗಾಗದೆ ಕ್ಲೀನ್ ಕ್ರಿಕೆಟರ್ ಆಗಿರುವ ಕೆಲವೇ ಆಟಗಾರರಲ್ಲಿ ಧೋನಿ ಕೂಡ ಒಬ್ಬರು. ಇಂತಹ ಮಿಸ್ಟರ್ ಕೂಲ್ ಮೇಲೆ ಅವರ ಅಭಿಮಾನಿಗಳೇ ಇದೀಗ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಸ್ವಾರ್ಥ ನಡೆ.

    ನಿನ್ನೆ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆದಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಚೆನ್ನೈ ನೀಡಿದ್ದ 163 ರನ್‌ಗಳ ಗುರಿಯನ್ನು 17.5 ಓವರ್‌ಗಳಲ್ಲೇ ಪಂಜಾಬ್​ ಮುಟ್ಟಿತು. ಇದರೊಂದಿಗೆ 10 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಂಜಾಬ್​ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

    ಈ ಪಂದ್ಯದಲ್ಲಿ ಧೋನಿ ಮಾಡಿದ ಆ ಒಂದು ಕೆಲಸ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಧೋನಿಯನ್ನು ಸ್ವಾರ್ಥಿ ಎಂದು ಕರೆಯುತ್ತಿದ್ದಾರೆ. ನಿಜವಾಗಿ ಏನಾಯಿತು ಅಂತ ನೋಡುವುದಾದರೆ, ಚೆನ್ನೈ ಇನ್ನಿಂಗ್ಸ್ ವೇಳೆ ಕೊನೆಯ ಓವರ್ ಬೌಲಿಂಗ್ ಮಾಡಲು ಅರ್ಷದೀಪ್ ಸಿಂಗ್ ಬಂದಿದ್ದರು. ಈ ವೇಳೆ ಕ್ರೀಸ್‌ನಲ್ಲಿ ಧೋನಿ-ಡರೈಲ್​ ಮಿಚೆಲ್ ಇದ್ದರು. ಧೋನಿ ಸ್ಟ್ರೈಕರ್​ ವಿಭಾಗದಲ್ಲಿದ್ದರೆ, ಸಹಜವಾಗಿ ಬೌಲರ್‌ಗಳ ಮೇಲೆ ಸ್ವಲ್ಪ ಒತ್ತಡವಿರುತ್ತದೆ. ಹೀಗಾಗಿಯೇ ಅರ್ಷದೀಪ್ ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ ಎಸೆತವನ್ನು ಧೋನಿ ಬೌಂಡರಿ ಬಾರಿಸಿದರು. ಆ ಬಳಿಕ ಅರ್ಷದೀಪ್​ ಮತ್ತೊಂದು ವೈಡ್ ಬೌಲ್ ಮಾಡಿದರು. ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಆದರೆ, ಶಾಟ್ ಸರಿಯಾಗಿ ಕನೆಕ್ಟ್ ಆಗಲಿಲ್ಲ. ಚೆಂಡು ಗಾಳಿಯಲ್ಲಿ ಹಾರಿತು. ಈ ವೇಳೆ ನಾನ್ ಸ್ಟ್ರೈಕರ್​ ವಿಭಾಗದಲ್ಲಿ ಡರೈಲ್​ ಮಿಚೆಲ್ ರನ್​ಗಾಗಿ ಓಡಿದರು. ಆದರೆ ಧೋನಿ ಅವರನ್ನು ಹಿಂದಕ್ಕೆ ಹೋಗುವಂತೆ ಹೇಳಿದರು. ಆದರೆ ಅದಾಗಲೇ ಡರೈಲ್​ ಮಿಚೆಲ್​, ಧೋನಿ ಇದ್ದ ಕ್ರೀಸ್‌ಗೆ ಹೋಗಿದ್ದರು ಮತ್ತು ವಾಪಸ್ ಬಂದರು. ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದರು. ಆದರೆ ಚೆಂಡು ವಿಕೆಟ್‌ಗೆ ತಾಗದ ಕಾರಣ ಮಿಚೆಲ್ ರನ್ ಔಟ್‌ನಿಂದ ಪಾರಾದರು. 4ನೇ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. 5ನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಬಾರಿಸಿದರು. ಈ ಪಂದ್ಯದಲ್ಲಿ ಧೋನಿ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 14 ರನ್ ಗಳಿಸಿರು.

    ಮಿಚೆಲ್‌ಗೆ ಸ್ಟ್ರೈಕ್​ ನೀಡದಿದ್ದಕ್ಕೆ ಧೋನಿ ಮೇಲೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಸಹ ಕೋಪಗೊಂಡಿದ್ದಾರೆ. ಮಿಚೆಲ್​ ಕೂಡ ಓರ್ವ ಉತ್ತಮ ಬ್ಯಾಟರ್​ ಅಲ್ಲವೇ? ಅವರಿಗೂ ಸ್ಟ್ರೈಕ್​ ಕೊಡಬೇಕಿತ್ತು. ಮಿಚೆಲ್​ ಏನು ಬೌಲರ್​ ಅಲ್ಲ, ಅವರು ಕೂಡ ಅದ್ಭುತ ಬ್ಯಾಟರ್​ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಧೋನಿ ಅವರ ನಡೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್​)

    ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಸಮಿಫೈನಲ್​ ತಲುಪಲ್ಲ! ಮಾಜಿ ಸ್ಟಾರ್​ ಕ್ರಿಕೆಟಿಗನ ಶಾಕಿಂಗ್​ ಹೇಳಿಕೆ

    ಮದ್ವೆಯಾದ ಒಂದೇ ತಿಂಗಳಲ್ಲಿ ಡಿವೋರ್ಸ್​!? ಮನಸ್ಸಿಗೆ ನೋವಾಗಿದೆ ಎಂದು ಕಣ್ಣೀರಿಟ್ಟ ಬಿಗಿಲ್​ ಪಾಂಡಿಯಮ್ಮ

    ಹೋಟೆಲ್​ಗೆ ಬಾ ಅಂತ ಸೌತ್​ ನಿರ್ದೇಶಕರೊಬ್ಬರು ರಾತ್ರಿ ಕಾರು ಕಳುಹಿಸಿದ್ದರು! ಸ್ಟಾರ್​ ನಟಿಯ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts