

ವಾರಣಾಸಿ: ಸಾಮಾನ್ಯವಾಗಿ ಊಟ ಆದ ಮೇಲೆ ಒಮ್ಮೆ ಬೀಡಾ ಜಿಗಿಯುವ ಪದ್ಧತಿ ಇದೆ. ನಮ್ಮ ಹಿರಿಯರು ಆಗಿನ ಕಾಲದಿಂದ ಊಟ ಆದ ಮೇಲೆ ಎಲೆ ಅಡಿಕೆ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದರು. ಬೀಡಾ ತಿನ್ನುವುದರಿಂದ ಜೀರ್ಣಕ್ರೀಯೆಗೆ ಸಹಾಯವಾಗುತ್ತದೆ ಎನ್ನಲಾಗುತ್ತದೆ. ಕೆಲವು ಅಂಗಡಿಗಳು ಬೀಡಾಕ್ಕೆ ಫೇಮಸ್ ಆಗಿದೆ. ಹೀಗೆ ಖ್ಯಾತಿ ಪಡೆದಿರುವ ಪಾನ್ ಶಾಪ್ವೊಂದರ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ.
ಬೀಡಾದಲ್ಲಿ ಬಳಕೆ ಆಗುವ ವೀಳ್ಯದೆಲೆ ಹಲವಾರು ಪೌಷ್ಟಿಕಾಂಶಗಳಿಂದ ತುಂಬಿದೆ. ಇದರಲ್ಲಿ ರಿಬೋಫ್ಲಾವಿನ್ ಅಂಶ, ಕ್ಯಾಲ್ಸಿಯಂ ಅಂಶ, ವಿಟಮಿನ್ ' ಸಿ ' ಮತ್ತು ಕ್ಯಾರೋಟಿನ್ ಅಂಶ ಅಡಕವಾಗಿದೆ.
ಬನಾರಸಿ ಪಾನ್ ತನ್ನ ವಿಶಿಷ್ಟ ರುಚಿಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಬಾಲಿವುಡ್ ತಾರೆಯರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರವರೆಗೆ ಬನಾರಸಿನಲ್ಲಿ ಸಿಗುವ ಪಾನ್ ಅಭಿಮಾನಿಗಳಾಗಿದ್ದಾರೆ. ಕಾಶಿಗೆ ಭೇಟಿ ನೀಡಿದ್ರೆ ದೇಶದಾದ್ಯಂತ ಪ್ರಸಿದ್ಧಗೊಂಡಿರುವ ಬನಾರಸ್ ಪಾನ್ ಸಿಗುವ ಈ 5 ಅಂಗಡಿಗಳಿಗೆ ಭೇಟಿ ನೀಡಲು ಮರೆಯದಿರಿ.
1) ವಾರಣಾಸಿಯ ನಾಡೆಸರ್ ಪ್ರದೇಶದಲ್ಲಿ ತಾಂಬೂಲಂ ಎಂಬ ಹೆಸರಿನ ಬನಾರಸಿ ಪಾನ್ ಶಾಪ್ ಇದೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ಈ ಅಂಗಡಿಯಲ್ಲಿ ಪಾನ್ ತಿಂದಿದ್ದಾರೆ.
2) ವಾರಣಾಸಿಯ ಅಸ್ಸಿ ಘಾಟ್ ಬಳಿ ಪಪ್ಪು ಚಾಯ್ ಕಾರ್ನರ್ನಲ್ಲಿ ಪಾನ್ ಶಾಪ್ ಇದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಖಿಲೇಶ್ ಯಾದವ್ ಇಲ್ಲಿ ಪಾನ್ ರುಚಿ ನೋಡಿದ್ದಾರೆ.
3) ಚೌಕ್ ಪ್ರದೇಶದಲ್ಲಿ ನೇತಾಜಿ ಪಾನ್ ಮಾರಾಟಗಾರರ ಅಂಗಡಿಯು 100 ವರ್ಷಗಳಿಂದಲೂ ಇದೆ. ಈ ಅಂಗಡಿಯಲ್ಲಿ ಹಲವು ಬಗೆಯ ಪಾನ್‌ಗಳು ಲಭ್ಯವಿವೆ. ಈ ಬೀಡಾ ಇಷ್ಟ ಪಡುವ ಗ್ರಾಹಕರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಸೇರಿದ್ದಾರೆ.
4) ಕೇಶವ್ ಪಾನ್ ಎನ್ನುವ ಮಾರಾಟಗಾರನು ಲಂಕಾ ಪ್ರದೇಶದಲ್ಲಿ ಅಂಗಡಿಯನ್ನು ಹೊಂದಿದ್ದಾನೆ. ಇತ್ತೀಚೆಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಾನ್ ತಿನ್ನಲು ಇಲ್ಲಿಗೆ ಬಂದಿದ್ದರು. ಅಮಿತಾಬ್ ಬಚ್ಚನ್, ಅಮಿತ್ ಶಾ, ಮುಲಾಯಂ ಸಿಂಗ್ ಮುಂತಾದ ಸೆಲೆಬ್ರಿಟಿಗಳು ಇಲ್ಲಿನ ಪಾನ್ ರುಚಿಯನ್ನು ಸವಿದಿದ್ದಾರೆ.
5) ನಡೇಸರ ಬಳಿಯ ಕೃಷ್ಣ ಪಾನ್ ಭಂಡಾರ್ 100 ವರ್ಷಕ್ಕೂ ಹೆಚ್ಚು ಹಳೆಯದು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಈ ಅಂಗಡಿಯಲ್ಲಿ ಪಾನ್ ರುಚಿ ನೋಡಿದ್ದಾರೆ.