'RCB' ಹೆಸರು ಬದಲಾವಣೆ!; ಹಿಂಟ್​​ ಕೊಟ್ರಾ'ಕಾಂತಾರ' ರಿಷಬ್ ಶೆಟ್ಟಿ

RCB
Published on

ಬೆಂಗಳೂರು: ಪ್ರತಿಬಾರಿಯಂತೆ ಈ ಬಾರಿಯೂ ಆರ್​ಸಿಬಿ ಅಭಿಮಾನಿಗಳು ಜೋಶ್​ನಲ್ಲಿದ್ದಾರೆ. ಕಪ್​ ನಮ್ಮದೆ ಎನ್ನುವ ಕೂಗು ಜೋರಾಗಿಯೆ ಇದೆ. ಆರ್​ಸಿಬಿ ಬಿಡುಗಡೆ ಮಾಡಿದ ಪೋಮೊವೊಂದು ಇದೀಗ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.

ಮಾರ್ಚ್​ 19ರಂದು ‘ಆರ್​ಸಿಬಿ ಅನ್​ಬಾಕ್ಸ್' ಕಾರ್ಯಕ್ರಮ ನಡೆಸಲಿದೆ. ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್​​ವುಡ್​ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ಕ್ರೀಡಾ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.

ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​ ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್​ 19ರಂದು ನಿಗದಿಯಾಗಿದೆ. ಪ್ರೋಮೊದಲ್ಲಿ ಕಂಬಳದ ಕೋಣಗಳೊಂದಿಗೆ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.

ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್​ಸಿಬಿ ತಂಡ ಈಗಾಗಲೇ ತಿಳಿಸಿದೆ.

ಕಾಂತಾರ ಸಿನೆಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿ ಬೆಂಗಳೂರು ಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್​ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ.

ಆದರೆ ಈ ಪ್ರೋಮೊ ನೋಡಿದ ಅಭಿಮಾನಿಗಳು ಏನಪ್ಪಾ? ನಮಗೆ ಅರ್ಥವಾಗ್ತಿಲ್ಲ..., ನೀವೆ ಹೇಳಿ..., ಹೆಸರು ಬದಲಾವಣೆ ಮಾಡುತ್ತೀರಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net