

ಬೆಂಗಳೂರು: ಕಾಲಿವುಡ್ ಹಿರಿಯ ನಟ ಶರತ್‌ಕುಮಾರ್ ಅವರ ಹಿರಿಯ ಪುತ್ರಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್ , ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಇದೆ ಖುಷಿಯಲ್ಲಿದ್ದ ವರಲಕ್ಷ್ಮಿ ಅವರಿಗೆ ಇದೀಗ ಎನ್‌ಐಎ ಶಾಕ್ ನೀಡಿದೆ.
ಸೌತ್ ಸ್ಟಾರ್ ನಟಿ ವರಲಕ್ಷ್ಮಿ ಶರತ್ ಕುಮಾರ್ಗೆ ಶಾಕ್ ಆಗಿದೆ. ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ನಟಿಗೆ ನೋಟಿಸ್ ಬಂದಿದೆಯಂತೆ.
ನಟಿ ವರಲಕ್ಷ್ಮಿ ಶರತ್ ಕುಮಾರ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ನೋಟಿಸ್ ಜಾರಿ ಮಾಡಿದೆ. ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆಕೆಯ ಮಾಜಿ ಆಪ್ತ ಸಹಾಯಕನನ್ನು ವಿಚಾರಣೆಗೆ ಒಳಪಡಿಸಲು ಕೊಚ್ಚಿಯ ಕಚೇರಿಗೆ ಹಾಜರಾಗುವಂತೆ ಆಕೆಗೆ ಆದೇಶ ನೀಡಲಾಗಿತ್ತು.
ಆದಿಲಿಂಗಂ ಎಂಬ ವ್ಯಕ್ತಿ ವರಲಕ್ಷ್ಮಿ ಶರತ್ ಕುಮಾರ್ ಬಳಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದ. ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರೊಂದಿಗೆ ಈತ ಸಂಪರ್ಕ ಹೊಂದಿದ್ದನ್ನು ಎನ್‌ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣದ ತನಿಖೆಯ ಭಾಗವಾಗಿ ಎನ್‌ಐಎ ಅಧಿಕಾರಿಗಳು ವರಲಕ್ಷ್ಮಿ ಅವರ ಸಹಾಯಕ ಆದಿಲಿಂಗಂನಿಂದ 300 ಕೆಜಿ ಹೆರಾಯಿನ್, ಎಕೆ 47 ಗನ್, 9 ಎಂಎಂ ಗನ್, 2,100 ಕೋಟಿ ಮೌಲ್ಯದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಕೂಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ನಟ ಶರತ್ ಕುಮಾರ್ ಅವರ ಪುತ್ರಿಯಾಗಿ ಇಂಡಸ್ಟ್ರಿಗೆ ಪರಿಚಯವಾದವರು ವರಲಕ್ಷ್ಮಿ . ಅವರು 'ತೆನಾಲಿ ರಾಮಕೃಷ್ಣ ಬಿಎ, ಬಿಎಲ್', 'ಕ್ರ್ಯಾಕ್', 'ನಂದಿ' ಮತ್ತು 'ವೀರಸಿಂಹ ರೆಡ್ಡಿ' ಮುಂತಾದ ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಇಂಡಸ್ಟ್ರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ವರಲಕ್ಷ್ಮಿ ತೆಲುಗು ಜೊತೆಗೆ ತಮಿಳು, ಕನ್ನಡ ಮತ್ತು ಮಲಯಾಳಂನಲ್ಲೂ ಸಿನಿಮಾ ಮಾಡಿದ್ದಾರೆ.