ಕೇಂದ್ರದಲ್ಲಿ ಬಲಿಷ್ಠ ಎನ್‌ಡಿಎ ಸರ್ಕಾರ ಬೇಕು ಎಂದು ಭಾರತದ ಜನತೆ ಈಗಾಗಲೇ ನಿರ್ಧರಿಸಿದ್ದಾರೆ: ಪ್ರಧಾನಿ ಮೋದಿ

WhatsApp Image 2024-05-21 at 8.53.50 AM
Published on

ನವದೆಹಲಿ: ನಿನ್ನೆ (ಮೇ.20) ದೇಶದ ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮವಾಗಿ ಮತದಾರರ ನಿರ್ಧಾರವೇನು ಎಂಬುದು ಪ್ರತಿಯೊಂದು ಮತದಲ್ಲಿ ಅಡಗಿದೆ. ಇದೀಗ ಬಿಡುಗಡೆಯಾದ ಪ್ರಾಥಮಿಕ ವರದಿಗಳ ಪ್ರಕಾರ, ಶೇಕಡ 57.38ರಷ್ಟು ವೋಟಿಂಗ್ ಆಗಿರುವ ಮಾಹಿತಿ ಲಭಿಸಿದೆ.

ಇನ್ನು ಲೋಕ ಸಮರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಸತತವಾಗಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಮತ್ತೊಮ್ಮೆ ತಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನಿಮ್ಮ ಆರ್ಶಿವಾದಗಳಿಂದ ನಾನು ಮಗದೊಮ್ಮೆ ಪ್ರಧಾನಿಯಾಗಿ ಸೇವೆ ಸಲ್ಲಿಸುವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದೀಗ ಮತದಾರರಿಗೆ ಟ್ವೀಟ್ ಮೂಲಕ ಹೃತ್ಪೂರ್ವಕ ಧನ್ಯವಾದ ತಿಳಿಸಿರುವ ಪ್ರಧಾನಿ, "ನಿನ್ನೆ ಮುಕ್ತಾಯಗೊಂಡ 2024ರ 5ನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ಎನ್‌ಡಿಎಗೆ ಬೆಂಬಲದ ಅಲೆ ಮತ್ತಷ್ಟು ಬಲಗೊಳ್ಳುತ್ತಿದೆ. ಕೇಂದ್ರದಲ್ಲಿ ಬಲಿಷ್ಠ ಎನ್‌ಡಿಎ ಸರ್ಕಾರ ಬೇಕು ಎಂದು ಭಾರತದ ಜನತೆ ನಿರ್ಧರಿಸಿದ್ದಾರೆ" ಎಂದರು.

"ಇಂಡಿಯಾ ಮೈತ್ರಿಕೂಟವು ಯಾವುದೇ ರೀತಿಯ ಮತಬ್ಯಾಂಕ್ ರಾಜಕೀಯವನ್ನು ಪ್ರಯತ್ನಿಸಬಹುದು. ಆದ್ರೆ, ಜನರು ಅವರನ್ನು ನಂಬುವುದಿಲ್ಲ" ಎಂದು ತಮ್ಮ ಅಧಿಕೃತ ಎಕ್ಸ್​ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net