ಭೇಟಿಯಾಗಲಿದ್ದಾರೆ ಮೋದಿ-ಮಸ್ಕ್: ಟ್ವಿಟರ್ ಖರೀದಿ ಬಳಿಕದ ಮೊದಲ ಭೇಟಿ

Modi mask
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ವಿಟರ್​ ಮಾಲೀಕ ಎಲನ್ ಮಸ್ಕ್ ಇಬ್ಬರೂ ಭೇಟಿಯಾಗಲಿರುವುದು ಕುತೂಹಲ ಕೆರಳಿಸಿದೆ. ಎಲನ್ ಮಸ್ಕ್ ಟ್ವಿಟರ್​ ಖರೀದಿ ಬಳಿಕ ಪ್ರಧಾನಿ ಮೋದಿಯನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದು, ಗಮನ ಸೆಳೆದಿದೆ.

ಸರ್ಕಾರಿ ಮೂಲಗಳ ಪ್ರಕಾರ, ಇಂದು ಯುಎಸ್​ನಲ್ಲಿ ಇರುವ ಪ್ರಧಾನಿ ಮೋದಿ ವಿವಿಧ ಕ್ಷೇತ್ರಗಳ ಹತ್ತಕ್ಕೂ ಅಧಿಕ ಚಿಂತಕ ನಾಯಕರನ್ನು ಭೇಟಿ ಮಾಡಲಿದ್ದು, ಆ ಪೈಕಿ ಎಲನ್ ಮಸ್ಕ್ ಕೂಡ ಒಬ್ಬರು ಎನ್ನಲಾಗಿದೆ. ಮೋದಿ 2015ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟರ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾಗ ಮಸ್ಕ್​ ಜತೆ ಭೇಟಿ ನಡೆದಿತ್ತು. ಆಗ ಮಸ್ಕ್ ಇನ್ನೂ ಟ್ವಿಟರ್ ಖರೀದಿಸಿರಲಿಲ್ಲ.

ಆದರೆ ಮಸ್ಕ್ ಟ್ವಿಟರ್ ಖರೀದಿ ಬಳಿಕ ಇದೇ ಮೊದಲ ಸಲ ಇಬ್ಬರ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಟೆಸ್ಲಾ ಫ್ಯಾಕ್ಟರಿಗಾಗಿ ಮಸ್ಕ್ ಭಾರತದಲ್ಲಿ ಜಾಗದ ಹುಡುಕಾಟದಲ್ಲಿರುವಾಗಲೇ ಈ ಭೇಟಿ ನಡೆಯುತ್ತಿರುವುದರಿಂದ ಇದು ಮತ್ತಷ್ಟು ಗಮನ ಸೆಳೆದಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net