ಜ್ಞಾನಯೋಗಿಯ ಬಳಿ ಪಾರಿವಾಳ; ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಬಿಟ್ಟು ಹೋಗದ ಪಕ್ಷಿ!

Siddeshwara Swamiji
Published on

ಬೀದರ್: ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇಹಲೋಕ ತ್ಯಜಿಸಿದ ಕೆಲವೇ ದಿನಗಳಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಪಾರಿವಾಳವೊಂದು ಅವರ ಭಾವಚಿತ್ರ ಬಿಟ್ಟು ತೆರಳದ ವಿದ್ಯಮಾನವೊಂದು ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಕಾಲೇಜೊಂದರಲ್ಲಿ ಈ ದೃಶ್ಯ ಕಂಡುಬಂದಿದೆ. ಇಲ್ಲಿನ ಅಥರ್ವ ಕಾಲೇಜಿನಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಭಾವಚಿತ್ರ ಇರಿಸಲಾಗಿದ್ದು, ಅಲ್ಲಿಗೆ ಇಂದು ಪಾರಿವಾಳವೊಂದು ಬಂದು ಆ ಫೋಟೋದ ಪಕ್ಕದಲ್ಲೇ ಕಾಲ ಕಳೆದಿದೆ. ಹತ್ತಿರದಲ್ಲೇ ಬೇರೆ ಫೋಟೋಗಳಿದ್ದರೂ ಸಿದ್ದೇಶ್ವರ ಶ್ರೀಗಳ ಫೋಟೋ ಬಳಿಯೇ ಕಾಯುವ ಮೂಲಕ ಈ ಪಕ್ಷಿ ಅಚ್ಚರಿ ಮೂಡಿಸಿದೆ.

ಬೆಳಗ್ಗೆಯಿಂದ ಬೇರೆ ಎಲ್ಲ ಫೋಟೋಗಳನ್ನ ಬಿಟ್ಟು ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರದ ಮುಂದೆ ಬಂದು ಕುಳಿತ ಪಾರಿವಾಳವನ್ನು ಕಾಲೇಜು ಸಿಬ್ಬಂದಿ ಓಡಿಸಲು ಪ್ರಯತ್ನಿಸಿದರೂ ಅದು ಫೋಟೋ ಬಿಟ್ಟು ಹೋಗಲಿಲ್ಲ. ಬೆಳಗ್ಗೆ 8.30ರಿಂದ ಸಿದ್ದೇಶ್ವರ ಸ್ವಾಮಿಗಳ ಫೋಟೋ ಮುಂದೆಯೇ ಇರುವ ಪಾರಿವಾಳ ಕೌತುಕ ಉಂಟಾಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net