40 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರಶ್ರೀ..

swamiji 2
Published on

ಉಡುಪಿ: ಬಾವಿಗೆ ಬಿದ್ದ ಬೆಕ್ಕನ್ನು ತಾವೇ ಇಳಿದು ರಕ್ಷಿಸುವ ಮೂಲಕ ಉಡುಪಿ ಪೇಜಾವರ ಮಠದ ಸ್ವಾಮೀಜಿ ಗಮನ ಸೆಳೆದಿದ್ದು, ಅವರ ಈ ಮಾರ್ಜಾಲ ಪ್ರೇಮ ಮೆಚ್ಚುಗೆಗೆ ಪಾತ್ರವಾಗಿದೆ. ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬೆಕ್ಕನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಉಡುಪಿಯ ಮುಚ್ಲುಕೋಡು ಸುಬ್ರಹ್ಮಣ್ಯ ದೇವಾಲಯದ ಬಳಿಯ ಬಾವಿಗೆ ಬೆಕ್ಕು ಬಿದ್ದಿತ್ತು. ದೇವಾಲಯದ ಸಿಬ್ಬಂದಿಗೆ ಈ ವಿಷಯ ಗೊತ್ತಾಗಿದ್ದು, ಬಳಿಕ ಅದು ಸ್ವಾಮೀಜಿಯವರಿಗೂ ತಿಳಿಯಿತು. ವಿಷಯ ತಿಳಿಯುತ್ತಿದ್ದಂತೆ ಸ್ವಾಮೀಜಿ ಸ್ವತಃ ಬೆಕ್ಕಿನ ರಕ್ಷಣೆಗೆ ಧಾವಿಸಿದ್ದರು.

ಹಗ್ಗದ ಸಹಾಯದಿಂದ 40 ಅಡಿ ಆಳದ ಬಾವಿಗೆ ಇಳಿದ ಸ್ವಾಮೀಜಿ, ಬೆಕ್ಕನ್ನು ಬಕೆಟ್​ವೊಂದರಲ್ಲಿ ಹಾಕಿ ಹಗ್ಗದ ಮೂಲಕ ಮೇಲಕ್ಕೆ ಕಳಿಸಿ ರಕ್ಷಣೆ ಮಾಡಿದ್ದಾರೆ. ಗೋರಕ್ಷಣೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿ ಇರುವ ಪೇಜಾವರಶ್ರೀಗಳು ಹಾವು-ಹದ್ದು ಮುಂತಾದ ಪ್ರಾಣಿ-ಪಕ್ಷಿಗಳನ್ನು ಕೂಡ ರಕ್ಷಿಸಿದ್ದರು. ಇದೀಗ ಬೆಕ್ಕನ್ನು ರಕ್ಷಿಸುವ ಮೂಲಕ ಅವರ ಪ್ರಾಣಿಪ್ರೀತಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net